ಕಡಲ್ಕೊರತೆ ಸಮಸ್ಯೆ ಪರಿಹರಿಸಲು ಸರಕಾರಗಳು ವಿಫಲ : ಇಲ್ಯಾಸ್ ತುಂಬೆ

Update: 2019-06-16 16:16 GMT

ಉಳ್ಳಾಲ: ಸರಕಾರ ಕರಾವಳಿ ಕರ್ನಾಟಕದ ಕಡಲ್ಕೊರತ ಸಮಸ್ಯೆಯನ್ನು ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಮತ್ತು ಈ ಬಾರಿ ನಾಶವಾದ ಸಂತ್ರಸ್ತ ಮನೆಗಳಿಗೆ ಪರಿಹಾರ ಕೊಡಬೇಕು ಮತ್ತು ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರ ಮಾಡಿ ಮಳೆಗಾಲದಲ್ಲಿ ಸುರಕ್ಷಿತ ಪರ್ಯಾಯ ವಸತಿ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾದ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ತಿಳಿಸಿದರು‌.

ಅವರು ಉಳ್ಳಾಲದ ಕಡಲ್ಕೊರತೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ನುಡಿದರು ಮತ್ತು ಅವರ ಸಮಸ್ಯೆಗಳನ್ನು ಆಲಿಸಿದರು.

ಉಳ್ಳಾಲದಲ್ಲಿ ನಷ್ಟವಾದ ಮನೆಗಳಿಗೆ ಕೂಡಲೆ ಪರಿಹಾರ ನೀಡಬೇಕು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಈ ಭಾಗದಲ್ಲಿ ಶಾಶ್ವತ ಕಡಲ್ಕೊರತೆ ತಡಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು.

ಈ ಸಂದರ್ಭ ಎಸ್.ಡಿ.ಪಿ.ಐ  ಪಕ್ಷದ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಉಳ್ಳಾಲ ವಿಧಾನ ಸಬಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ, ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ಅಧ್ಯಕ್ಷ ಅಬೂಬಕ್ಕರ್, ಕೌನ್ಸಲರುಗಳಾದ ರಮೀಝ್ ಕೋಡಿ, ಅಸ್ಗರ್ ಅಲಿ ಅಳೇಕಲ, ವಾರ್ಡ್ ಮುಖಂಡರುಗಳಾದ ನಿಝಾಮುದ್ದೀನ್ ಮೇಲಂಗಡಿ, ರವೂಫ್ ಹಳೆಕೋಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News