ನೇಣು ಬಿಗಿದು ಆತ್ಮಹತ್ಯೆ
Update: 2019-06-16 22:06 IST
ಉಡುಪಿ, ಜೂ.16: ವಿಪರೀತ ಮದ್ಯಪಾನ ಚಟದಿಂದಾಗಿ ಹಣಕಾಸಿಗೆ ತೊಂದರೆಗೆ ಸಿಲುಕಿದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಬಬ್ಬುಸ್ವಾಮಿ ದೈವಸ್ಥಾನ ಬಳಿ ನಡೆದಿದೆ.
ಮೃತನನ್ನು ಗಣೇಶ (40) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುವ ಗಣೇಶ ಶನಿವಾರ ಸಂಜೆ 6ಗಂಟೆಯಿಂದ 6:30ರ ನಡುವಿನ ಅವಧಿಯಲ್ಲಿ ಈ ಕೃತ್ಯ ಎಸಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.