ಚಂದ್ರನಗರ ಸಫಿಯಾ ಉಮರಬ್ಬ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Update: 2019-06-17 12:11 GMT

ಕಾಪು: ಕಬ್ಯಾಡಿ ಪುತ್ತಬ್ಬ ಬೀಫಾತಿಮಾ ಫ್ಯಾಮಿಲಿ ಟ್ರಸ್ಟ್ ಅಂಗ ಸಂಸ್ಥೆಯಾದ ಸಫಿಯಾ ಉಮರಬ್ಬ ಫ್ಯಾಮಿಲಿ ಟ್ರಸ್ಟ್ ಚಂದ್ರನಗರ ಕಾಪು ಇದರ ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕಬ್ಯಾಡಿ ಪುತ್ತಬ್ಬ ಬೀಫಾತಿಮಾ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಪರ್ಕಳ ಮಾತನಾಡಿ, ಕುಟುಂಬಸ್ಥರಲ್ಲಿ ಪ್ರೀತಿ, ಮಮತೆ ಬೆಳಸಬೇಕು. ಪರಸ್ಪರ ಸಹಕಾರ ಮನೋಭವ ಮೂಡಿಬರಬೇಕು. ಅದಕ್ಕೆಂದು ಎಲ್ಲಾ ಫ್ಯಾಮಿಲಿ ಒಂದಾಗಿ ಆಯಾ ಕುಟುಂಬದ ಫ್ಯಾಮಿಲಿ ಟ್ರಸ್ಟ್ ಮಾಡಬೇಕು ಎಂದು ಕರೆ ನೀಡಿದರು.

ಸಫಿಯಾ ಉಮರಬ್ಬ ಫ್ಯಾಮಿಲಿ ಟ್ರಸ್ಟ್ ಚಂದ್ರನಗರ ಕಾಪು ಇದರ ಅಧ್ಯಕ್ಷ ಮುಹಮ್ಮದ್ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಮಜೂರು-ಮಲ್ಲಾರು ಇದರ ಸಿರಾಜುಲ್ ಹುದಾ ಮದ್ರಸ ಹಾಗೂ ಕೊಂಬಗುಡ್ಡೆ ಉಮರ್ ಬಿನಿಲ್ ಖತ್ತಾಬ್ ಇದರ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಿರಾಜುಲ್ ಹುದಾ ಮದ್ರಸದಲ್ಲಿ ಮಸ್ಜಿದ್‍ನ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್‍ರ ಅಧ್ಯಕ್ಷತೆ ವಹಿಸಿದ್ದರು. ಮಜೂರು - ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಎಂ.ಕೆ. ಅಬ್ದುಲ್ ರಶೀದ್ ಸಖಾಫಿ ಅಲ್‍ಖಾಮಿಲ್ ಆರ್ಶೀವಚನ ನೀಡಿದರು.

ವಕ್ಫ್ ಬೋರ್ಡಿನ ಹಿರಿಯ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ಹೆಜಮಾಡಿ ಭಾಗವಹಿಸಿದ್ದರು. ಜನಸಂಪರ್ಕ ಜನಸೇವಾ ವೇದಿಕೆ ಕಾಪು ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಸಾಯಿ ಆರ್ಚೆಡ್ ಟ್ರಸ್ಟ್ ಅಧ್ಯಕ್ಷ ದಿವಾಕರ ಡಿ. ಶೆಟ್ಟಿ, ಮಿಸ್ಕೀನ್ ಫೌಂಡೇಶನ್ ಅಧ್ಯಕ್ಷ ಅಝೀಝ್ ಮಜೂರು, ತಖ್ವಿತುಲ್ ಯಂಗ್‍ಮೆನ್ಸ್ ಅಧ್ಯಕ್ಷ ನಝೀರ್ ಮಜೂರು, ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷ ಅಶ್ರಫ್ ಮಜೂರು, ಬಿಜೆಎಂ ಕೋಶಾಧಿಕಾರಿ  ಪಿ.ಎಮ್. ಇಬ್ರಾಹಿಮ್ ಪಾದೂರು, ಕಾರ್ಯದರ್ಶಿ ಹಮೀದ್ ಮಲ್ಲಾರ್, ಮುನೀರ್ ಪರ್ಕಳ, ಅಬ್ದುರ್ರಝಾಕ್ ಕೊಪ್ಪ, ಖಾಸಿಂ ಗುಡ್ಡೇಕೇರಿ, ಅಬ್ದುಲ್ ರಝಾಕ್ ಗುಡ್ಡೆಕೇರಿ, ಮುಖ್ಯೋಪಾಧ್ಯಾಯ ಅಬೂಬಕ್ಕರ್ ಸಅದಿ, ಉಸ್ಮಾನ್ ಮದನಿ ಉಪಸ್ಥಿತರಿದ್ದರು.

ಶೌಕತಾಲಿ ಮಲ್ಲಾರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News