ನಾಟಾ: ಆಳ್ವಾಸ್‍ನ ಆಕಾಂಕ್ಷಾ ವಿ ಅಕ್ಕಿಹಾಲ್ ಮೂರನೇ ರ್ಯಾಂಕ್

Update: 2019-06-17 12:45 GMT

ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ನಾಟಾ) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು , ಅದರಲ್ಲಿ ಆಕಾಂಕ್ಷಾ ವಿ. ಅಕ್ಕಿಹಾಲ್ ಮೂರನೇ ರ್ಯಾಂಕ್ ಗಳಿಸಿದ್ದಾರೆ ಎಂದು ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ. 

ಎ. 14 ರಂದು ನಡೆದ ನಾಟಾ ಪರೀಕ್ಷೆಯಲ್ಲಿ ಕೃತಿಕಾ ಡಿ. (28 ನೇ), ಅನ್ವೇಶ ಜೈನ್ (31ನೇ), ಕವನ ಜೆ ಹೌಶಿ (35ನೇ), ಚಂದನ ಎ ಎಂ. (36ನೇ), ಅನಿರುದ್ದ್ ಎಂ. ಎಂ. (52ನೇ), ದೀಪಿಕಾ ಹೆಚ್ ಎಸ್ (73ನೇ), ಪ್ರಿಯಾಂಕ ವಿ ನಾಯ್ಕ್ (78ನೇ), ಮೈತ್ರಿ ಪಟವರ್ಧನ್ (82ನೇ), ವರುಣ್ ಸತ್ಪುಟೆ (94ನೇ), ನಿರಂಜನ್ ಎಸ್ ಪಟ್ಟಣಶೆಟ್ಟಿ (100ನೇ),ಕಿರಣ್ ಕುಮಾರ್(108ನೇ), ದಿಯಾ ದೇಚಮ್ಮ ಡಿ (110ನೇ), ಲಿಖಿತ್ ಕೆ (116ನೇ), ಶ್ರೀನಿಧಿ (123ನೇ), ವೈ ಲಿಖಿತ ಗೌಡ (127ನೇ), ಕೀರ್ತಿ ಎನ್ ಸಿ (129ನೇ), ನಿಹಾಲ್ ಜಿ ಆರ್ (132ನೇ), ಅನುಶ್ (144ನೇ), ಮನೋಜ್ ಎನ್ (145ನೇ), ಕಾರ್ತಿಕ್ ಕುಲ್ಕರ್ಣಿ (150ನೇ) ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳು 150ರ ಒಳಗಡೆ ರ್ಯಾಂಕ್ ಪಡೆದು ವಿಶಿಷ್ಠ ಸಾಧನೆ ಗಳಿಸಿದ್ದಾರೆ.

100 ರ್ಯಾಂಕ್ ಒಳಗಡೆ 11 ಮಂದಿ, 150 ರ್ಯಾಂಕ್ ಒಳಗಡೆ 21 ಮಂದಿ, 200 ರ್ಯಾಂಕ್ ಒಳಗಡೆ 35 ಮಂದಿ, 300 ರ್ಯಾಂಕ್ ಒಳಗಡೆ 52 ಮಂದಿ, 500 ರ್ಯಾಂಕ್ ಒಳಗಡೆ 90 ಮಂದಿ, 1000 ರ್ಯಾಂಕ್ ಒಳಗಡೆ 187 ಮಂದಿ, 2000 ರ್ಯಾಂಕ್ ಒಳಗಡೆ 335 ಮಂದಿ, 2,500 ರ್ಯಾಂಕ್ ಒಳಗಡೆ 386 ಮಂದಿ , 3000 ರ್ಯಾಂಕ್ ಒಳಗಡೆ 405 ಮಂದಿ ತೇರ್ಗೆಡೆಯಾಗಿದ್ದಾರೆ.  

ಪರೀಕ್ಷೆಗೆ ಕುಳಿತ 523 ವಿದ್ಯಾರ್ಥಿಗಳಲ್ಲಿ 480 ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆಯಾಗಿರುವ ಆರ್ಕಿಟೆಕ್ಚರ್ ಕೋರ್ಸ್ ಸೇರಲು ಸಹಕಾರಿಯಾಗಿದೆ. ಪ್ರತೀ ವರ್ಷ ನಾಟಾ ವಿಭಾಗದಲ್ಲಿ ಸಂಸ್ಥೆಯ ಸಾಧನೆ ಮಹತ್ವದಾಗಿದ್ದು ಹಲವಾರು ವಿದ್ಯಾರ್ಥಿಗಳ ಆರ್ಕಿಟೆಕ್ಟ್ ಆಗುವ ಕನಸು ಯಶಸ್ವಿಯಾಗಿ ಸಾಕಾರಗೊಳ್ಳುತಿದೆ. ಈ ಸಾಧನೆಗೆ ನಮ್ಮ ಜೊತೆ ಕೈಜೋಡಿಸಿದ ಬೆಂಗಳೂರಿನ `ಖಿhe ಆesigಟಿ ಗಿeಟಿue' ಸಂಸ್ಥೆಯನ್ನು ಕೂಡ ಈ ಸಂದರ್ಭದಲ್ಲಿ ಅಭಿನಂದಿಸುತ್ತೇವೆ. ಕಳೆದ ಬಾರಿ ಆಳ್ವಾಸ್‍ನ 326 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ರಾಜ್ಯ ಮಟ್ಟದಲ್ಲಿ ವೈಷ್ಣವಿ ನಾಯಕ್ 2 ನೇ ಹಾಗು ಶಶಾಂಕ್ ಡಿ 5 ನೇ ರ್ಯಾಂಕ್ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ನಾಟಾ ಸಂಯೋಜಕರಾದ ಅಶ್ವತ್ಥ್ ಎಸ್.ಎಲ್, ಗಣನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News