ಮಾಜಿ ಸೈನಿಕರ ಕುಟುಂಬ ಪಿಂಚಣಿಗೆ ನಾಮ ನಿರ್ದೇಶನ
Update: 2019-06-17 20:45 IST
ಉಡುಪಿ, ಜೂ.17: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಾಜಿ ಸೈನಿಕರು ಈವರೆಗೆ ಕುಟುಂಬ ಪಿಂಚಣಿಗಾಗಿ ನಾಮ ನಿರ್ದೇಶನ (ಎಂಡೋರ್ಶ್‌ಮೆಂಟ್ ಆಪ್ ಫ್ಯಾಮಿಲಿ ಪೆಂಶನ್) ಮಾಡದೇ ಇರುವವರು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಈ ಕಾರ್ಯಾಲಯಕ್ಕೆ ಭೇಟಿ ನೀಡುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.