×
Ad

ಬೆಂಗಳೂರಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗದ ಸರ್ಕ್ಯೂಟ್ ಬೆಂಚ್

Update: 2019-06-17 20:47 IST

ಉಡುಪಿ, ಜೂ.17: ರಾಷ್ಟ್ರೀಯ ಗ್ರಾಹಕ ಆಯೋಗದ ಸರ್ಕ್ಯೂಟ್ ಬೆಂಚ್ (ಸಂಚಾರಿ ಪೀಠ) ಆ.5ರಿಂದ 9 ರವರೆಗೆ ಬೆಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸಹಾಯಕ ಆಡಳಿತ ಅಧಿಕಾರಿ ತಿಳಿಸಿದ್ದಾರೆ.

ಗ್ರಾಹಕರು ತಮಗೆ ವಸ್ತುಗಳಲ್ಲಾಗುವ ಮೋಸಕ್ಕೆ ಸಂಬಂಧಿಸಿದಂತೆ ಈ ಪೀಠದಲ್ಲಿ ಪ್ರಕರಣ ದಾಖಲಿಸಿ, ನ್ಯಾಯ ಪಡೆಯಬಹುದು. ಈ ಹಿಂದಿನ ಪ್ರಕರಣಗಳಲ್ಲಿ ನ್ಯಾಯ ಕೋರಿ ದೆಹಲಿಗೆ ಗ್ರಾಹಕರು ಅಲೆದಾಡುವುದನ್ನು ತಪ್ಪಿಸಲು ಈ ಸರ್ಕ್ಯೂಟ್ ಬೆಂಚ್‌ನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಪೀಠ ಕಾರ್ಯನಿರ್ವಹಿಸುವ ವಿಳಾಸ ಹಾಗೂ ಸ್ಥಳದ ವ್ಯವಸ್ಥೆ ಮಾಡಿಕೊಳ್ಳಲು ರಾಜ್ಯ ಸರಕಾರಕ್ಕೆ ಆಯೋಗವು ಸೂಚಿಸಿದೆ.

ಅದರಂತೆ ಈ ಸರ್ಕ್ಯೂಟ್ ಬೆಂಚ್‌ನೊಂದಿಗೆ ಸಮನ್ವಯತೆ ಸಾಧಿಸಲು ನೋಡೆಲ್ ಅಧಿಕಾರಿಯೊಬ್ಬರನ್ನು ಸಹ ನೇಮಿಸುವಂತೆ ಮನವಿ ಮಾಡಿದೆ ಎಂದು ಉಡುಪಿ ಜಿಲ್ಲಾ ಗ್ರಾಹಕರ ವೇದಿಕೆ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News