ಅಲಂಕಾರಿಕಾ ಮೀನು ಮರಿ ಉತ್ಪಾದನೆ, ಪಾಲನಾ ತರಬೇತಿ
Update: 2019-06-17 20:49 IST
ಉಡುಪಿ, ಜೂ.17:ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಲಂಕಾರಿಕಾ ಮೀನು ಮರಿ ಉತ್ಪಾದನೆ ಮತ್ತು ಪಾಲನಾ ತರಬೇತಿ ಕಾರ್ಯಕ್ರಮವನ್ನು ಜೂ.24ರಿಂದ 29ರವರೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಅಕ್ವೇರಿಯಂ ಜೋಡಣೆ ಮತ್ತು ಅಲಂಕಾರಿಕಾ ಮೀನು ಮರಿಗಳ ಉತ್ಪಾದನೆ, ಆಹಾರ ಪೂರೈಕೆ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ನುರಿತ ತಜ್ಞರಿಂದ ಮತ್ತು ಯಶಸ್ವಿ ಉದ್ಯಮಿಗಳಿಂದ ಕೊಡಲಾಗುವುದು.
ಆಸಕ್ತ ಯುವಕ, ಯುವತಿಯರು, ರೈತ ಹಾಗೂ ರೈತ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ದೂರವಾಣಿ ಸಂಖ್ಯೆ: 0820-2563923ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.