ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರಿಗೆ ‘ವಿಶ್ವಾರ್ಪಣಂ’

Update: 2019-06-17 16:42 GMT

ಉಡುಪಿ, ಜೂ.17: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥ ಶ್ರೀ  ವಿರಾಟ ಪರ್ವ ಪ್ರವಚನ ಮಂಗಲ ಹಾಗೂ ಅವರ ಷಷ್ಟಿಪೂರ್ತಿ ಪ್ರಯುಕ್ತ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀ  ರಾಜಾಂಗಣದಲ್ಲಿ ‘ವಿಶ್ವಾರ್ಪಣಂ’ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಇದರ ಅಂಗವಾಗಿ ಅದಮಾರು ಶ್ರೀ ರಾಜಾಂಗಣದಲ್ಲಿ ರಾಘವೇಂದ್ರ ವಿಜಯ, ಶ್ರೀಕೃಷ್ಣ ಲೀಲಾಮೃತ ವಿಷಯಗಳ ಬಗ್ಗೆ ನೀಡಿದ ಪ್ರವಚನಗಳನ್ನು ಸಂಗ್ರಹಿಸಿ ತತ್ವ ಸಂಶೋಧನಾ ಸಂಸತ್‌ನಿಂದ ಪ್ರಕಾಶಿಸಲ್ಪಟ್ಟ ಎರಡು ಕೃತಿಗಳು ಹಾಗೂ ಶ್ರೀ  60 ವರ್ಷಗಳ ಸಾಧನೆಗಳ ಚಿತ್ರಗಳು ಮತ್ತು ವಿದ್ವಾಂಸರ ಅಭಿಮಾನಿಗಳ ಲೇಖನಗಳಿರುವ ಸ್ಮರಣ ಸಂಚಿಕೆ ಳನ್ನು ಬಿಡುಗಡೆಗೊಳಿಸಲಾಯಿತು.

ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀ, ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀ ಆಶೀರ್ವಚನ ನೀಡಿದರು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.

ಸೋಮವಾರ ಬೆಳಗ್ಗೆ ‘ವಿಶ್ವಾಪರ್ಣಂ’ನ ಅಂಗವಾಗಿಒಂದು ಕೋಟಿ ಸಂಖ್ಯೆಯಲ್ಲಿ ಧನ್ವಂತರಿ ಜಪ ಹಾಗೂ ಒಂದು ಲಕ್ಷವರ್ತಿಯಲ್ಲಿ ಮತ್ಸಾದಿ ದಶ ಕುಂಡಗಳಲ್ಲಿ 108 ಋತ್ವಿಜರಿಂದ ಧನ್ವಂತರಿ ಯಾಗವು ನಡೆಯಿತು. ನಂತರ 42 ಪುಣ್ಯ ಕ್ಷೇತ್ರ ಹಾಗೂ ಪುಣ್ಯ ನದಿಗಳ ಜಲವನ್ನು ಹೋಮದ ಕಲಶಗಳಿಗೆ ಅಭಿಮಂತ್ರಣೆ ಮಾಡಿ, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಗೆ, ಪರ್ಯಾಯ ಶ್ರೀ ವಿದ್ಯಾಧೀಶತೀರ್ಥರು , ಶ್ರೀ ಈಶಪ್ರಿಯ ತೀರ್ಥ ಶ್ರೀ  ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಕಲಶಾಭಿಷೇಕ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News