ಫಾದರ್ ಮುಲ್ಲಾರ್ ವಾಕ್‌ಶ್ರವಣ ಪದವಿ ತರಗತಿಗಳ 13ನೆ ಬ್ಯಾಚ್ ಆರಂಭ

Update: 2019-06-17 16:51 GMT

ಮಂಗಳೂರು, ಜೂ.17: ನಗರದ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜಿನ ವಾಕ್‌ ಮತ್ತು ಶ್ರವಣ ಪದವಿ ತರಗತಿಗಳ 2019-2020ನೆ ತಂಡದ ನೂತನ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಸಭಾಂಗಣದಲ್ಲಿಂದು ಹಮ್ಮಿಕೊಂಡ ಪ್ರೇರಣಾ ಕಾರ್ಯಕ್ರಮವನ್ನು ಎ.ಜೆ.ವೈದ್ಯಕೀಯ ಸಂಶೋಧನಾ ಸಂಸ್ಥೆಯ ಫಾರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ.ಫ್ರಾನ್ಸಿಸ್ ಎನ್.ಪಿ.ಮೊಂತೊರೋ ಇಂದು ಉದ್ಘಾಟಿಸಿದರು.

ಮಾನವ ಸಂವಹನದಲ್ಲಿ ಪ್ರಮುಖ ಪಾತ್ರವಹಿಸುವ ಮಾತು ಮತ್ತು ಶ್ರವಣ ಕ್ರೀಯೆಯ ನ್ನು ಅಧ್ಯಯನ ಮಾಡಲು ಆಸಕ್ತಿವಹಿಸಿರುವ ವಿದ್ಯಾರ್ಥಿಗಳನ್ನು ಮೊಂತೆರೋ ಪ್ರೋತ್ಸಾಹಿಸಿ ಶುಭ ಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಆಡಳಿತ ನಿರ್ದೇಶಕ ವಂ.ರುಡಾಲ್ಫ್ ರವಿ ಡೇಸಾ,ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ.ಅಜಿತ್ ಮಿನೇಜಸ್,ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ನೆಲ್ಸ್‌ನ್ ಧೀರಜ್ ಪೈ ,ಚಾಪ್ಲಿನ್ ಮೊಂತೆರೋ, ಪ್ರಾಂಶುಪಾಲ ಅಖಿಲೇಶ್ ಸ್ವಾಗತಿಸಿ, ಪ್ರೊ.ಸಿಂಥಿಯಾ ವಂದಿಸಿದರು.

ನಿರ್ದೇಶಕ ರಿಚರ್ಡ್ ಕೊಯೆಲ್ಲೋ ಸಂಸ್ಥೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಡಾ.ಅಜು ಅಬ್ರಹಾಂ,ಪ್ರೊ.ಅಖಿಲೇಶ್, ಪ್ರೊ.ಸಿಂಥಿಯಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News