ಶ್ರೀನಿವಾಸ ವಿಶ್ವ ವಿದ್ಯಾನಿಲಯ- ಎಕ್ಸ್‌ಲ್ಯಾನ್ಸ್, ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಒಡಂಬಡಿಕೆ

Update: 2019-06-17 16:54 GMT

ಮಂಗಳೂರು, ಜೂ. 17: ಶ್ರೀನಿವಾಸ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ವಿಕಸಕ್ಕೆ ಪೂರಕವಾಗಿ ಅಮೇರಿಕಾದ ಹೆಸರಾಂತ ಕಂಪನಿಯಾದ ವೆಂಚರ್ ಸಾಫ್ಟ್‌ಗ್ಲೋಬಲ್‌ನ ಸಹ ಸಂಸ್ಥೆಯಾದಎಕ್ಸ್‌ಲ್ಯಾನ್ಸ್, ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರೊಂದಿಗೆ ಈಎಸ್‌ಈಪಿ (ಎಂಪ್ರೋಸ್ಕಿಲ್ ಎನ್‌ಹ್ಯಾನ್ಸ್‌ಮೆಂಟ್ ಪ್ರೊಗ್ರಾಮ್ )ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಒಪ್ಪಂದವು ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಲಭಿಸಲು ನೆರವಾಗುತ್ತದೆ ಎಂದು ಕುಲಪತಿಗಳಾದ ಡಾ. ಪಿ. ಎಸ್. ಐತಾಳ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕ್ರೆಡಿಟ್ ಸಿಸ್ಟಮ್ ಪದ್ಧತಿ, ಸ್ಟೀಮ್ ಎಜ್ಯುಕೇಶನ್, ಈಎಸ್‌ಈಪಿ, ಪ್ರಯೋಗಾತ್ಮಕ ಶಿಕ್ಷಣ ವ್ಯವಸ್ಥೆ, ಪ್ರತೀ ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಣ್ಣಕಾರ್ಯ ಯೋಜನೆಗಳು, ಐಪಿಆರ್‌ತರಬೇತಿ, ಪೇಟೆಂಟ್/ಕೃತಿಸ್ವಾಮ್ಯ/ ಜರ್ನಲ್ ಪ್ರಕಟಣೆಗಳು ಹಾಗೂ ಪದವಿಯ ಕೊನೆಯ ಸೆಮಿಸ್ಟರ್‌ನಲ್ಲಿಕೈಗಾರಿಕಾಗುಣಮಟ್ಟದ ಸಾಫ್ಟ್‌ವೇರ್ ತಂತ್ರಜ್ಞಾನವನ್ನುತನ್ನ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ. ಇದಕ್ಕಾಗಿ ಶ್ರೀನಿವಾಸ ವಿಶ್ವವಿದ್ಯಾಲಯವು ಹಲವು ನುರಿತ ಕಂಪನಿಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳು ಕಳೆದ ಸುಮಾರು 30 ವರ್ಷಗಳಿಂದ ಪ್ರಖ್ಯಾತ ಚಾರ್ಟೆಡ್‌ ಅಕೌಂಟೆಂಟ್ ಎ ರಾಘವೇಂದ್ರರಾವ್ ಮುಂದಾಳತ್ವದಲ್ಲಿ ಗುಣಮಟ್ಟದ ಶಿಕ್ಷಣವನ್ನು ರಾಜ್ಯ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದು, ಎಐಸಿಟಿಇ, ಎನ್‌ಸಿಟಿಇ, ಎನ್‌ಸಿಐ, ಎಂಸಿಐ, ಡಿಸಿಐ, ಪಿಸಿಐ, ಸಿಓಎ ಮತ್ತು ನ್ಯಾಕ್ ಎ ಗ್ರೇಡ್ ಮಾನ್ಯತೆಯನ್ನು ಪಡೆದಿದೆ.

2013ರಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯ ಎಂಬ ಖಾಸಗೀ ವಿಶ್ವವಿದ್ಯಾಯದ ಹೆಗ್ಗಳಿಕೆಗೆ ಪಾತ್ರವಾಗಿದೆ. 2015ರಲ್ಲಿ ಈ ವಿಶ್ವವಿದ್ಯಾಲಯವು 8 ಕಾಲೇಜುಗಳನ್ನು ಹೊಂದಿದ್ದು ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿಭಾಗದ ಸುಮಾರು 80 ವಿಷಯಗಳಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಶ್ರೀನಿವಾಸ್ ವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಿರುವ ಈ ನಾಲ್ಕು ವರ್ಷಗಳ ಈಎಸ್‌ಈಪಿ ಕೋರ್ಸ್ ಯುಪಿಎಸ್‌ಸಿ, ಎಸ್‌ಬಿಐ-ಐಪಿ, ಪ್ರಮುಖ ಐಟಿ ಕಂಪನಿಗಳು, ಬಿಎಫ್‌ಎಸ್‌ಐ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಶಗಳನ್ನು ಕೇಂದ್ರೀಕರಿಸಿ ಮೊದಲ ವರ್ಷದಿಂದಅಂತಿಮ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಸಾಮರ್ಥ್ಯವನ್ನು ಬೆಳಸಲು ಇದು ಸಹಕಾರಿಯಾಗುತ್ತದೆ. ಇದರಲ್ಲಿ ಲಾಜಿಕಲ್‌ರೀಸನಿಂಗ್, ಕ್ವಾಂಟಿಟೇಟಿವ್ ಎಬಿಲಿಟಿ, ಪ್ರಸಕ್ತ ವಿದ್ಯಾಮಾನ, ಸಾಫ್ಟ್‌ವೇರ್ ಪ್ರೋ ಮೌಖಿಕ ಮತ್ತು ಭಾಷಾ ಕೌಶಲ್ಯಗಳ ತರಬೇತಿಯನ್ನು ನೀಡಲಾಗುತ್ತದೆ ಎಂದು ಕುಲಪತಿ ಡಾ.ಪಿ.ಎಸ್.ಐತಾಳ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿಗಳಾದ ಡಾ.ಎ. ಶ್ರೀನಿವಾಸ ರಾವ್, ಕುಲಸಚಿವರುಗಳಾದ ಡಾ. ಅನಿಲ್ ಕುಮಾರ್ ಹಾಗೂ ಡಾ.ಅಜಯ್‌ಕೆ.ಜಿ. ಮತ್ತುಎಕ್ಸ್‌ಲಾನ್ಸ್‌ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಅಶ್ವಿನ್ ಕೃಷ್ಣ ಹಾಗೂ ಶ್ರೀ ಜಿ. ಶ್ರೀನಿವಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News