​ಎಂಎ ತುಳು ಪದವಿ ಕೋರ್ಸಿಗಾಗಿ ಅರ್ಜಿ ಆಹ್ವಾನ

Update: 2019-06-17 16:59 GMT

ಮಂಗಳೂರು, ಜೂ.17: ಮಂಗಳೂರು ವಿವಿಯ 2019-20ನೆ ಸಾಲಿನ ಎಂಎ ತುಳು ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ. ಈ ಕೋರ್ಸ್ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುವಂತೆ ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಕೋರ್ಸ್ ಕಾರ್ಯನಿರ್ವಹಿಸಲ್ಪಡುತ್ತದೆ.

ಈ ಕೋರ್ಸಿನಲ್ಲಿ ತುಳು ಭಾಷೆಯ ಪ್ರಾಚೀನತೆ, ತುಳು ಸಂಸ್ಖತಿ, ತುಳುವರ ಆರಾಧನೆಗಳು ತುಳು ಲಿಪಿ, ತುಳುವರ ಕೃಷಿ ಪದ್ಧತಿ, ವ್ಯಾಪಾರ ಸಹಿತ ತುಳುವರ ಉದ್ಯಮಶೀಲತೆಯ ವಿಷಯಗಳು ಒಳಗೊಂಡಿದೆ. ತುಳುವರು, ತುಳುವ ಸಮಾಜವನ್ನು ಅಧ್ಯಯನ ಮಾಡಲು ಈ ಕೋರ್ಸಿನಲ್ಲಿ ಅವಕಾಶವಿರುತ್ತದೆ. ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಪದವೀಧರರು ತುಳು ಎಂಎ ಪ್ರವೇಶ ಪಡೆಯಲು ಅರ್ಹರಾಗಿದ್ದು, ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಅಭ್ಯಾಸ ಮಾಡಿಕೊಂಡು ಎಂಎ ಸ್ನಾತಕೋತ್ತರ ಪದವಿ ಪಡೆಯಬಹುದು.

ಅಸಕ್ತರು ಅರ್ಜಿ ಹಾಗೂ ಮಾಹಿತಿ ಪುಸ್ತಕಗಳನ್ನು ವಿವಿ ಸಂಧ್ಯಾ ಕಾಲೇಜಿನಿಂದ ಪಡೆಯಬಹುದು ಎಂದು ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News