ಬಂಗಾಳದ ಏಕೈಕ ಕಾಂಗ್ರೆಸ್ ಸಂಸದನಿಗೆ ಮೋದಿ ಶಹಬ್ಬಾಸ್!

Update: 2019-06-18 05:11 GMT

ಹೊಸದಿಲ್ಲಿ, ಜೂ.18: ಪಶ್ಚಿಮ ಬಂಗಾಳದಿಂದ ಲೋಕಸಭೆಗೆ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಸಂಸದರಾಗಿರುವ ಅಧೀರ್ ರಂಜನ್ ಚೌಧರಿಯವರನ್ನು ಪ್ರಧಾನಿ ನರೇಂದ್ರ ಮೋದಿ "ನೈಜ ಹೋರಾಟಗಾರ" ಎಂದು ಬಣ್ಣಿಸಿದ ಅಪರೂಪದ ಘಟನೆ ನಡೆದಿದೆ. ರವಿವಾರ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಚೌಧರಿಯವರ ಬೆನ್ನು ತಟ್ಟಿದ ಮೋದಿ, ನಿಜಕ್ಕೂ ಹೋರಾಟಗಾರ ಎಂದು ಶ್ಲಾಘಿಸಿದರು.

ಸಭೆಯ ಮುಕ್ತಾಯದಲ್ಲಿ ಸಭಾಂಗಣದಿಂದ ಹೊರಹೋಗುವ ಸಂದರ್ಭದಲ್ಲಿ ಚೌಧರಿಯವರ ಬೆನ್ನುತಟ್ಟಿದ ಮೋದಿ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಮತ್ತು ಆನಂದ್ ಶರ್ಮಾ ಅವರ ಮುಂದೆ, "ಇವರೊಬ್ಬ ಹೋರಾಟಗಾರ" ಎಂದು ಚೌಧರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

"ನಾನು ಮೋದಿಯವರಿಗೆ ಶುಭ ಕೋರಿದೆ. ಆಗ ಅವರು ನನ್ನ ಬೆನ್ನುತಟ್ಟಿ, ಎಲ್ಲರ ಮುಂದೆ, ಅಧೀರ್ ಒಬ್ಬ ಹೋರಾಟಗಾರ ಎಂದು ಹೊಗಳಿದರು. ನನಗೆ ಸಂತೋಷವಾಯಿತು" ಎಂದು ಅಧೀರ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.

"ನನಗೆ ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ಇಲ್ಲ. ನಾವು ಜನಪ್ರತಿನಿಧಿಗಳು. ಬಿಜೆಪಿಯವರು ಕೂಡಾ ಜನಪ್ರತಿನಿಧಿಗಳು. ನಾವು ನಮ್ಮ ಧ್ವನಿ ಎತ್ತುತ್ತೇವೆ. ಅವರು ಕೂಡಾ ಮಾಡುತ್ತಾರೆ. ನಾವು ಸಂಸತ್ತಿನಲ್ಲಿ ಮಾತನಾಡಲು ಹೋಗುತ್ತೇವೆಯೇ ವಿನಃ ಯುದ್ಧದಲ್ಲಿ ಹೋರಾಡುವ ಸಲುವಾಗಿ ಅಲ್ಲ" ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News