ಮಂಗಳೂರು: 59 ಪೊಲೀಸ್ ಸಿಬ್ಬಂದಿಗೆ ಮುಂಬಡ್ತಿ

Update: 2019-06-18 12:17 GMT

ಮಂಗಳೂರು, ಜೂ.18: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 29 ಮಂದಿ ಹೆಡ್‌ಕಾನ್‌ಸ್ಟೇಬಲ್‌ಗಳಿಗೆ ಸಹಾಯಕ ಉಪನಿರೀಕ್ಷಕರಾಗಿ, 30 ಕಾನ್‌ಸ್ಟೇಬಲ್‌ಗಳಿಗೆ ಹೆಡ್‌ಕಾನ್‌ಸ್ಟೇಬಲ್‌ಗಳಾಗಿ ಮುಂಬಡ್ತಿ ನೀಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಹೆಡ್‌ಕಾನ್‌ಸ್ಟೇಬಲ್‌ನಿಂದ ಎಎಸ್ಸೈ: ಶಿವಪ್ಪ ಗೌಡ (ಪಾಂಡೇಶ್ವರ ಪೊಲೀಸ್ ಠಾಣೆಯಿಂದ ಬಂದರು ಠಾಣೆಗೆ ವರ್ಗಾವಣೆ-ಮುಂಬಡ್ತಿ), ವಿನಯ ಕುಮಾರ್ ಎ. (ಸುರತ್ಕಲ್‌ನಿಂದ ಉರ್ವ ಠಾಣೆ), ವಿವೇಕಾನಂದ ಪಡಿಯಾರ್ (ಉರ್ವ ಠಾಣೆ), ರಂಜನ್ ಎಂ.ಕೆ. (ಉರ್ವದಿಂದ ಮಂಗಳೂರು ಗ್ರಾಮಾಂತರ ಠಾಣೆ), ತಾರನಾಥ (ಮುಲ್ಕಿಯಿಂದ ಸುರತ್ಕಲ್ ಠಾಣೆ), ಕವಿತಾ (ಉರ್ವದಿಂದ ಬರ್ಕೆ ಠಾಣೆ), ಸೂರಜ್ ಕುಮಾರ್ ಶೆಟ್ಟಿ (ಪಾಂಡೇಶ್ವರ ಸಂಚಾರ ಠಾಣೆಯಿಂದ ಪಾಂಡೇಶ್ವರ ಠಾಣೆ), ವೆಂಕಟೇಶ್ (ಬಂದರ್ ಠಾಣೆಯಿಂದ ಉಳ್ಳಾಲ ಠಾಣೆ), ಚಿತ್ತರಂಜನ್ ದಾಸ್ (ಮುಲ್ಕಿಯಿಂದ ಬಂದರ್ ಠಾಣೆ), ಜಗದೀಶ್ ಕೆ. (ಪಣಂಬೂರಿನಿಂದ ಬಂದರ್), ಶೇಖರ್ ಗಟ್ಟಿ (ಪಣಂಬೂರಿನಿಂದ ಬಂದರ್), ಹರೀಶ್ಚಂದ್ರ ಪುರುಷ (ಕೆಎಎನಿಂದ ಬಂದರು), ರಾಮ (ಸಿಸಿಬಿಯಿಂದ ಬಜ್ಪೆ, ಕರುಣಾಕರ (ಕದ್ರಿ ಸಂಚಾರ ಠಾಣೆಯಿಂದ ಸಿಸಿಆರ್‌ಬಿ), ಸುಧಾಕರ ರಾವ್ (ಮೂಡುಬಿದಿರೆಯಿಂದ ಕದ್ರಿ), ಜಗನ್ನಾಥ್ ಶೆಟ್ಟಿ (ಬಂದರ್‌ನಿಂದ ಕಾವೂರು), ರಜನ್ (ಕದ್ರಿಯಿಂದ ಸುರತ್ಕಲ್), ಮಾಧವ (ಮುಲ್ಕಿಯಿಂದ ಕದ್ರಿ ಸಂಚಾರ ಠಾಣೆ), ಮೋಹನ್ ಎಲ್. (ಗ್ರಾಮಾಂತರದಿಂದ ಸಿಸಿಬಿ), ಮುರಳೀಧರ ಬಲ್ಲಾಳ್ (ಪಾಂಡೇಶ್ವರದಿಂದ ಕಾವೂರು ಠಾಣೆ), ಜಯರಾಮ ಪಿ. (ಬರ್ಕೆಯಿಂದ ಕಾವೂರು), ಎಂ. ರಾಜು (ಮುಲ್ಕಿಯಿಂದ ಬಂದರ್ ಸಂಚಾರ ಠಾಣೆ), ಸುರೇಶ್ (ಪಣಂಬೂರಿನಿಂದ ಪಾಂಡೇಶ್ವರ ಸಂಚಾರ ಠಾಣೆ), ಬಾಲಕೃಷ್ಣ (ಕೋಣಾಜೆಯಿಂದ ಪಾಂಡೇಶ್ವರ), ಜಯರಾಮ ಕೆ.ಎಸ್. (ಪಾಂಡೇಶ್ವರದಿಂದ ಕದ್ರಿ ಸಂಚಾರ ಠಾಣೆ), ರಾಜೇಶ್ ಎಚ್‌ಜೆ. (ಡಿಸಿಆರ್‌ಇಯಿಂದ ಸಿಎಸ್‌ಬಿ), ಪದ್ಮನಾಭ (ಬಂದರ್ ಸಂಚಾರ ಠಾಣೆಯಿಂದ ಸಿಸಿಆರ್‌ಬಿ), ಪೀಟರ್ ಸೋನ್ಸ್ (ಕಂಕನಾಡಿ ನಗರ ಠಾಣೆಯಿಂದ ಸಿಎಸ್‌ಬಿ), ಬಾಲಕೃಷ್ಣ (ಕದ್ರಿ ಸಂಚಾರ ಠಾಣೆಯಿಂದ ಸಿಸಿಆರ್‌ಬಿ) ಭಡ್ತಿ ನೀಡಿ ಆದೇಶ ಮಾಡಲಾಗಿದೆ.

ಎಚ್‌ಸಿಗಳಾಗಿ ಭಡ್ತಿ: ಪ್ರಮೋದ್ ಕುಮಾರ್, ಸತೀಶ್ ಎಂ.ಆರ್., ಶಿವಪ್ರಸಾದ್, ಮೋಹನ್‌ದಾಸ್, ಕೀರ್ತಿ ಡಿ.ಕೆ., ಲಲಿತಾ ಲಕ್ಷ್ಮೀ, ರಾಘವೇಂದ್ರ ಕೆ.ಎಂ., ಪ್ರೇಮಾನಂದ, ಬಸವರಾಜ್, ಚಂದ್ರಶೇಖರ್, ಪ್ರಿತೇಶ್, ನೂತನ್ ಕುಮಾರ್, ಯೋಗರಾಜ್, ಪ್ರದೀಪ್ ಕೆ.ಸಿ., ಕುಮಾರ್ ಪೂಜಾರ್, ಮೋಹಿತ್, ಕುಶಲ್ ಹೆಗ್ಡೆ, ಅಣ್ಣಪ್ಪ, ಮಹೇಶ್, ವಾದಿರಾಜ್, ಪ್ರವೀಣ್ ಕೆ., ಸುಧೀರ್ ಕುಮಾರ್, ಹರಿಪ್ರಸಾದ್, ಚಂದ್ರಹಾಸ ರೈ, ಜ್ಯೋತಿ ವಿ., ಭರತ್‌ರಾಜ್ ಕೆ., ಸುಕೇಶ್ ಪೂಜಾರಿ, ಪ್ರಮೋದ್ ಕೆ., ಸುಧೀರ್ ಕುಮಾರ್, ಭರಣಿ ದೀಕ್ಷಿತ್, ರಾಜೇಶ್, ನಾರಾಯಣ, ನಿರಂಜನ, ಜಯರಾಮ್, ಶರತ್ ಕುಮಾರ್, ಶಶಿಧರ್, ಹರೀಶ್ ನಾಕ್ ಟಿ., ಶರತ್ ಕುಮಾರ್, ಹಿರ್ಯ ನಾಯಕ್, ನಾರಾಯಣ, ದಿನೇಶ್, ದೇವರಾಜ್, ವಿನ್ಸೆಂಟ್ ರೋಡ್ರಿಗಸ್, ನಯನಾ ಆರ್.ಎನ್., ರಂಜಿತ್ ಕುಮಾರ್, ಆಶಿತ್ ವಿಶಾಲ್ ಡಿಸೋಜ, ವಿಶ್ವನಾಥ್, ಮಂಜುನಾಥ, ಶಿವಪ್ರಸಾದ್, ಮುಹಮ್ಮದ್ ಹುಸೈನ್, ಶೇಖಪ್ಪ ಮಲ್ಹೋತ್ರಾ, ರವಿ ಎಚ್., ಸಂತೋಷ್ ಡಿ.ಕೆ., ಚೆರಿಯನ್, ಲೋಹಿತ್ ಕೆ., ಸಂದೀಪ್ ಅಂಚನ್, ಬಶೀರ್ ಅಹ್ಮದ್ ರೊಲ್ಲಿ, ಗೋವರ್ಧನ್, ಮಂಜುಳಾ, ಶಿವಪ್ಪ ಗೌಡ ಪಿ., ವಿನೋದ್ ಬಿ., ಹನುಮ ರೆಡ್ಡಿ, ಆನಂದ, ಮಂಜುನಾಥ ಎನ್., ಪ್ರದೀಪ್ ಕೆ., ಆನಂದ ಸ್ವಾಮಿ, ಪ್ರದೀಪ್ ಕುಮಾರ್ ಎಂ. ಬಂಗಾರ್ ಅವರನ್ನು ಎಚ್‌ಸಿಗಳಾಗಿ ಭಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

ಕ್ರಿಮಿನಲ್ ಪ್ರಕರಣ: ಐವರ ಭಡ್ತಿಗೆ ತಡೆ

ಇಬ್ಬರು ಪೊಲೀಸ್ ಸಿಬ್ಬಂದಿ ಮುಂಬಡ್ತಿ ಪರಿತ್ಯಜಿಸಿದ್ದು, ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಏಳು ಮಂದಿಯ ಮುಂಬಡ್ತಿ ನಾನಾ ಕಾರಣದಿಂದ ತಡೆ ಹಿಡಿಯಲಾಗಿದೆ. ಕ್ರಿಮಿನಲ್ ಪ್ರಕರಣ ಹಿನ್ನೆಲೆಯಲ್ಲಿ ಐದು ಮಂದಿಯ ಭಡ್ತಿಗೆ ಹಿನ್ನಡೆಯಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News