ಸಂಸ್ಕೃತದಲ್ಲಿ ಪಠ್ಯ ಬೋನೆಯಿಂದ ಸುಸಂಸ್ಕೃತರಾಗಲು ಸಾಧ್ಯ: ಅದಮಾರುಶ್ರೀ

Update: 2019-06-18 12:55 GMT

ಉಡುಪಿ, ಜೂ.18: ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಠ್ಯಕ್ರಮಗಳನ್ನು ಸಂಸ್ಕೃತದಲ್ಲಿ ಬೋಧಿಸುವುದರಿಂದ ಸುಸಂಸ್ಕೃತ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯ ಎಂದು ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಕ ಸಂಘದ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಪ್ರಥಮ ಸೆಮಿಸ್ಟರ್ ಪದವಿ ತರಗತಿಗಳ ನೂತನ ಸಂಸ್ಕೃತ ಪಠ್ಯಪುಸ್ತಕಗಳ ಅನಾವರಣ ಮತ್ತು ಕಾರ್ಯಾಗಾರವನ್ನು ಉ್ಘಾಟಿಸಿ ಅವರು ಮಾತನಾಡು ತಿದ್ದರು.

ಸಂಸ್ಕೃತ ಅಧ್ಯಯನದಿಂದ ಉತ್ತಮ ಜೀವನ ಸಾಧ್ಯವಿದ್ದು, ಸಂಸ್ಕೃತವನ್ನು ಕೇವಲ ಅಂಕ ಗಳಿಕೆಗೆ ಮಾತ್ರವೇ ಸೀಮಿತಗೊಳಿಸಬಾರದು. ಸಂಸ್ಕೃತ ಇಲ್ಲದೆ ಕನ್ನಡ ಭಾಷೆ ಅಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆಗಳಲ್ಲೂ ಮಕ್ಕಳಿಗೆ ಸಂಸ್ಕೃತ ಸುಲಲಿವಾಗಿ ಸಿಗುವಂತಾಗಬೇಕು ಎಂದರು.

ಆದಿಚುಂಚನಗಿರಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ.ಮಧುಸೂದನ ಅಡಿಗ ಮಾತನಾಡಿ, ದೇವ ಭಾಷೆಯಾಗಿರುವ ಸಂಸ್ಕೃತ ಭಾಷೆ ಕೇವಲ ದೇವರ ಗುಡಿಗೆ ಮಾತ್ರ ಸೀಮಿತವಾಗಿರಬಾರದು. ಸಂಸ್ಕೃತವು ಪರಿನಿಷ್ಠ ಸ್ವರೂಪತೆಯನ್ನು ಪಡೆದುಕೊಂಡಿದೆ. ಈ ಭಾಷೆಗೆ ಬದಾವಣೆ ಅಗತ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಪ್ರೊ.ಮಂಜುನಾಥ ಎನ್.ಭಟ್, ಕಟೀಲು ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಭಾಸ್ಕರ್ ಭಟ್, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ರಮಾನಂದ ಭಟ್, ಮಂಗಳೂರು ಮ್ಯಾಪ್ಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ.ಸುರೇಖಾ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ವಹಿಸಿದ್ದರು. ಮಂಗಳೂರು ವಿವಿ ಸಂಸ್ಕೃತ ಶಿಕ್ಷಕ ಸಂಘದ ಅಧ್ಯಕ್ಷ ಡಾ.ರಮೇಶ್ ಟಿ.ಎಸ್. ಸ್ವಾಗತಿಸಿದರು. ಡಾ.ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News