ಚುನಾವಣೆಯಲ್ಲಿ ಮತಯಂತ್ರ ಕೈಬಿಡುವಂತೆ ಆಗ್ರಹಿಸಿ ಮನವಿ

Update: 2019-06-18 12:56 GMT

ಉಡುಪಿ, ಜೂ.18: ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ದಕ್ಕೆ ಉಂಟು ಮಾಡುತ್ತಿರುವ ಇವಿಎಂ ಮತಯಂತ್ರಗಳ ಬಳಕೆಯನ್ನು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಕೊನೆಗೊಳಿಸಬೇಕು ಮತ್ತು ಹಿಂದಿನಂತೆ ಮತ ಪತ್ರಗಳ ವ್ಯವಸ್ಥೆಗೆ ಮರಳಬೇಕೆಂದು ಆಗ್ರಹಿಸಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಗಳಿಗೆ ಇಂದು ಮನವಿ ಸಲ್ಲಿಸಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೊದಲ 4 ಹಂತದ ಚುನಾವಣೆ ಯಲ್ಲಿ ಇವಿಎಂ ಮತಯಂತ್ರಗಳಲ್ಲಿ ದೋಷ ಕಂಡುಬಂದಿದೆ ಎಂದು ದಿ ಕ್ವಿಂಟ್ ಡಾಟ್‌ಕಾಮ್ ವರದಿ ಮಾಡಿದೆ. ಅಲ್ಲದೆ ದೇಶದಾದ್ಯಂತ 373 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕೂ ಎಣಿಕೆಯಾದ ಮತಕ್ಕೂ ತಾಳೆಯಾಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿ ಗಿಂತ ಹೆಚ್ಚು ಮತಗಳು ಎಣಿಕೆಯಾಗಿವೆ. ಈ ಹೆಚ್ಚಿನ ಮತಗಳನ್ನು ಹಾಕಿದ್ದಾ ದರೂ ಯಾರು? ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಮನವಿಯಲ್ಲಿ ದೂರ ಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ರಮೇಶ್ ಮಾಬಿಯಾನ್, ಆರ್‌ಪಿಐ ರಾಜ್ಯ ಕಾರ್ಯದರ್ಶಿ ಶೇಖರ್ ಹಾವಂಜೆ, ಜಿಲ್ಲಾ ಕಾರ್ಯದರ್ಶಿ ಪುರಂದರ ವಾರಂಬಳ್ಳಿ, ಮುಖಂಡರಾದ ಸುಕೇಶ್ ಹಾವಂಜೆ, ವಿಠಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News