ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಖಂಡಿತ: ಲಾರೆನ್ಸ್ ಡೇಸಾ

Update: 2019-06-18 12:57 GMT

ಉಡುಪಿ, ಜೂ.18: ಸದಸ್ಯರೆಲ್ಲರೂ ಸಮಾನ ಮನಸ್ಕರಾಗಿದ್ದರೆ ಮಾತ್ರ ಸಂಘಟನೆ ಬಲಿಷ್ಠಗೊಳ್ಳಲು ಸಾಧ್ಯ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಖಂಡಿತ ಎಂದು ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಲಾರೆನ್ಸ್ ಡೇಸಾ ಹೇಳಿದ್ದಾರೆ.

ನಿರಂತರ್ ಉದ್ಯಾವರ ಸಂಘಟನೆಯ ಆಶ್ರಯದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಸಭಾಭವನದಲ್ಲಿ ಜರಗಿದ ‘ಪಾಸ್ ಪೋರ್ಟ್’ ಕೊಂಕಣಿ ಚಲನಚಿತ್ರ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.

ಕೊಂಕಣಿ ಮತ್ತು ತುಳು ಹಾಸ್ಯ ಕಲಾವಿದ ರಾಜೇಶ್ ಫೆರ್ನಾಂಡಿಸ್ ಉದ್ಯಾವರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಕುಲಪತಿ ವಂದನೀಯ ಫಾ.ಸ್ಟ್ಯಾನಿ ಬಿ. ಲೋಬೊ, ಚಲನಚಿತ್ರದ ನಿರ್ಮಾಪಕ ವಂ.ಫಾ.ರೊಯ್ಸನ್ ಫೆರ್ನಾಡಿಸ್ ಶುಭ ಹಾರೈಸಿದರು.

ಸಂಘಟನೆಯ ಸದಸ್ಯರಾದ ಮೈಕಲ್ ಡಿಸೋಜ, ರೋಶನ್ ಕ್ರಾಸ್ತಾ, ರೊನಾಲ್ಡ್ ಡಿಸೋಜ, ಸುನೀಲ್ ಡಿಸೋಜ, ಅನಿಲ್ ಡಿಸೋಜ, ಜೂಲಿಯಾ ಡಿಸೋಜ, ಸವಿತಾ ಡಿಸೋಜ, ಒಲಿವೀರ ಮಥಾಯಸ್, ಸಿಂಥಿಯಾ ನರೋನ್ನಾ ಉಪಸ್ಥಿತರಿದ್ದರು.

ನಿರಂತರ ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಉದ್ಯಾವರ ಸ್ವಾಗತಿಸಿ ದರು. ಕಾರ್ಯಕ್ರಮದ ಸಂಚಾಲಕಿ ಜುಡಿತ್ ಪಿರೇರಾ ವಂದಿಸಿದರು. ರೋಶನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News