ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ: ಶರದ್ ಕಾಲಾಸ್ಕರ್ ಪೊಲೀಸ್ ಕಸ್ಟಡಿ ವಿಸ್ತರಣೆ

Update: 2019-06-18 13:54 GMT

 ಮುಂಬೈ, ಜೂ.18: ಪ್ರಗತಿಪರ ಚಿಂತಕ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಗೋವಿಂದ ಪನ್ಸಾರೆಯವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿತ ಸಂಘಪರಿವಾರ ಕಾರ್ಯಕರ್ತ ಶರದ್ ಕಾಲಾಸ್ಕರ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ಕೋಲಾಪುರದ ಸ್ಥಳೀಯ ನ್ಯಾಯಾಲಯ ಜೂನ್ 24ರ ವರೆಗೆ ವಿಸ್ತರಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಹತ್ಯೆಗೆ ಸಂಬಂಧಿಸಿದಂತೆ ಕಾಲಾಸ್ಕರ್ ವಿರುದ್ಧ ಬಹಳ ಮುಖ್ಯ ಸಾಕ್ಷಿಯೊಂದು ಮಹಾರಾಷ್ಟ್ರ ಪೊಲೀಸ್‌ನ ವಿಶೇಷ ತನಿಖಾ ತಂಡಕ್ಕೆ ದೊರಕಿದೆ. ಹಾಗಾಗಿ ಕಾಲಾಸ್ಕರ್ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂದು ಸಾರ್ವಜನಿಕ ಅಭಿಯೋಜಕ ಶಿವಾಜಿರಾವ್ ರಾಣೆ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಈ ಪ್ರಕರಣದ ತನಿಖೆ ನಡೆಸುತ್ತಿರುವ ತಿರುಪತಿ ಕಾಕಡೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಕಾಲಾಸ್ಕರ್‌ನ ಏಳು ದಿನಗಳ ಪೊಲೀಸ್ ಕಸ್ಟಡಿ ಮಂಗಳವಾರ ಕೊನೆಯಾಗಿದೆ. ಆತ ಪ್ರಗತಿಪರ ಚಿಂತಕ ನರೇಂದ್ರ ದಾಬೋಲ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲೂ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಪನ್ಸಾರೆ ಹತ್ಯೆ ಸಂಚಿನಲ್ಲಿ ಕೋಲಾಪುರದಲ್ಲಿ ನನ್ನ ಜೊತೆ ಇನ್ನೊರ್ವನೂ ಇದ್ದ ಎಂದು ಕಾಲಾಸ್ಕರ್ ತಿಳಿಸಿದ್ದಾನೆ. ಆದರೆ ಆ ವ್ಯಕ್ತಿಯ ಹೆಸರು ಹಾಗೂ ಇತರ ಮಾಹಿತಿಗಳನ್ನು ಆತ ನಮಗೆ ನೀಡಿಲ್ಲ. ಕೃತ್ಯ ನಡೆಸಿದ ನಂತರ ಆಯುಧಗಳನ್ನು ನಾಶ ಮಾಡುವ

ಜವಾಬ್ದಾರಿಯನ್ನು ಆತನಿಗೆ ನೀಡಲಾಗಿತ್ತು ಎನ್ನುವುದು ನಮ್ಮ ಅನುಮಾನ ಎಂದು ರಾಣೆ ತಿಳಿಸಿದ್ದಾರೆ. ಕಾಲಾಸ್ಕರ್ ಹಾಗೂ ಇತರ ಆರೋಪಿಗಳು ಕರ್ನಾಟಕದ ಬೆಳಗಾವಿಯಲ್ಲಿ ಬಂದೂಕು ಚಲಾಯಿಸಲು ತರಬೇತಿ ಪಡೆದಿದ್ದರು ಎಂದು ರಾಣೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News