ಇಂದಿನ ಸಮಾಜ ಶಿಕ್ಷಕರಿಗೆ ಸ್ಥಾನಮಾನ ಕೊಡುವುದರಲ್ಲಿ ವಿಫಲವಾಗಿದೆ: ಸಯ್ಯದ್ ಬ್ಯಾರಿ

Update: 2019-06-18 15:06 GMT

ಮಂಗಳೂರು, ಜೂ.18: ಆರೋಗ್ಯಕರ ಸಮಾಜ ನಿಮಾರ್ಣದಲ್ಲಿ ಶಿಕ್ಷಕರ ಪ್ರಮುಖ ಪಾತ್ರವಿದೆ. ಆದರೆ ಶಿಕ್ಷಕರಿಗೆ ಇಂದಿನ ಸಮಾಜವು ಯಾವ ಸ್ಥಾನಮಾನ ನೀಡಬೇಕಾಗಿತ್ತೋ ಅದರಲ್ಲಿ ವಿಫಲವಾಗಿದೆ ಎಂದು ಬ್ಯಾರಿ ಅಕಾಡಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅಭಿಪ್ರಾಯಿಸಿದ್ದಾರೆ.

ಬಬ್ಬುಕಟ್ಟೆಯ ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಶಾಂತಿ ಎಜ್ಯುಕೇಶನ್ ಟ್ರಸ್ಟ್  ಕನ್ವಿನರ್  ಕೆ.ಎಮ್. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

ಶಾಂತಿ ಎಜ್ಯುಕೇಶನ್ ಟ್ರಸ್ಟ್‌ನ ಮಾಜಿ ಕಾರ್ಯದರ್ಶಿ ಕೆ. ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದ ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

ಅಭಿನಂದನಾ ಕಾರ್ಯಕ್ರಮವನ್ನು ಉಪನ್ಯಾಸಕಿ ಮಂಜುಳ ಹಾಗೂ ಶಿಕ್ಷಕಿ ಪ್ರೀತಿ ನೆರವೇರಿಸಿದರು. ವಿದ್ಯಾರ್ಥಿನಿಯರಾದ ಉಜ್ರಾ ಕೈರುನ್ನೀಸ, ಫಾತಿಮ ಅನ್ಸಾ, ಖದೀಜಾ ಹನ್ನಾ ಹಾಗೂ ಫಾತಿಮಾ ನಿಮ್ರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಂತಿ ಎಜ್ಯುಕೇಶನ್ ಟ್ರಸ್ಟ್ ನ ಸದಸ್ಯೆ ಸಮೀನ ಅಫ್ಸಾನ್ ರಕ್ಷಕರನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಹಿರ್ ಕಮಾಲ್, ಉಸ್ಮಾನ್ ಹಂಗ್ಲೂರ್, ಕಾಲೇಜಿನ ಅಧ್ಯಕ್ಷ ಅಬ್ದುರ್ರಹ್ಮಾನ್, ಸಂಚಾಲಕ ರಹ್ಮತುಲ್ಲಾ, ಶಾಂತಿ ಎಜ್ಯುಕೇಶನ್ ಟ್ರಸ್ಟನ ಮಾಜಿ ಅಧ್ಯಕ್ಷ ಕೆ.ಎಮ್ ಶರೀಫ್, ಟ್ರಸ್ಟಿ ಸಮೀನ ಅಫ್ಸಾನ್ , ಹಿರಾ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. 

ಪಿ.ಯು. ವಿಭಾಗದ ವಿದ್ಯಾರ್ಥಿನಿಯರಾದ ಹಲೀಮಾ ಜಿಕ್ರ ಮತ್ತು ಸಿಹಾಂ ಶೇಖ್ ಕುರ್ ಆನ್ ಪಠಿಸಿದರು. ಉಪನ್ಯಾಸಕಿ ಅನಿಟಾ ಡಯಾನ ಸ್ವಾಗತಿಸಿ, ಶಿಕ್ಷಕಿ ಲತೀಫಾ ವಂದಿಸಿದರು. ಉಪನ್ಯಾಸಕಿ ದಿಲ್ನವಾಝ್ ಮತ್ತು ವಿದ್ಯಾರ್ಥಿನಿ ಹಲೀಮಾ ಅಫ್ರೀನ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News