ಚರಂಡಿಗೆ ಬಿದ್ದು ಮೃತ್ಯು
Update: 2019-06-18 21:55 IST
ಕೋಟ, ಜೂ.18: ವಿಪರೀತ ಮದ್ಯ ಸೇವನೆ ಮಾಡಿ ತೂರಾಡಿಕೊಂಡು ಚರಂಡಿಗೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜೂ.17ರಂದು ಅಪರಾಹ್ನ ವೇಳೆ ಕಾವಡಿ ಹೈಸ್ಕೂಲ್ ಬಳಿ ನಡೆದಿದೆ.
ಮೃತರನ್ನು ಕುಂಭಾಶಿ ಒರವಡಿ ಗ್ರಾಮದ ರಾಘವೇಂದ್ರ ಪೂಜಾರಿ (38) ಎಂದು ಗುರುತಿಸಲಾಗಿದೆ. ಜೂ.16ರಂದು ಬೆಳಗ್ಗೆ ಕೆಲಸಕ್ಕೆ ಹೋದ ಇವರ ಮೃತದೇಹವು ಜೂ.18ರಂದು ಬೆಳಗ್ಗೆ 7ಗಂಟೆಗೆ ಚರಂಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.