ಮುಲ್ಕಿ: ಅಂತರಾಜ್ಯ ಕಳವು ಆರೋಪಿಗಳ ಬಂಧನ; 40 ಲಕ್ಷ ರೂ.ಮೌಲ್ಯದ ಸೊತ್ತ ವಶ

Update: 2019-06-18 16:33 GMT

ಮಂಗಳೂರು, ಜೂ.18: ವಾಹನ, ಮನೆ, ದೈವಸ್ಥಾನದಿಂದ ಕಳವು ಮಾಡುತ್ತಿದ್ದ ಇಬ್ಬರು ಅಂತರ್‌ ರಾಜ್ಯ ಕಳವು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದು, ಅವರಿಂದ 40 ಲಕ್ಷ ರೂ. ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ನಾಡು ಗ್ರಾಮದ ಕೊಳ್ನಾಡು ಕೆ.ಎಸ್.ರಾವ್ ನಗರದ ಸವಾದ್ ಯಾನೆ ಚವ್ಚಾ ಕರಿಮಣಿ (24) ಹಾಗೂ ತೋಕೂರು ಗ್ರಾಮದ ಸುಬ್ರಹ್ಮಣ್ಯ ದೇವಳದ ಬಳಿಯ ನಿವಾಸಿ  ಸಿನಾನ್ (19) ಬಂಧಿತ ಆರೋಪಿಗಳು.

ಗೋವಾ ದಲ್ಲಿ ಕಳವು ಮಾಡಿದ್ದಾರೆ ಎನ್ನಲಾದ ನೋಂದಣಿ ಸಂಖ್ಯೆ ಅಳವಡಿಸದ ಪಾರ್ಚುನರ್ ಕಾರು ಹಾಗೂ ನೋಂದಣಿ ಸಂಖ್ಯೆ ಅಳವಡಿಸದ ಎರಡು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕದಿಕೆ, ಸಂತೆಕಟ್ಟೆ ಕಡೆಗಳಲ್ಲಿ ಮನೆ ಹಾಗೂ ದೈವಸ್ಥಾನ ಕಳ್ಳತನ ಮಾಡಿದ ಆರೋಪದಲ್ಲಿ ಚಿಲ್ಲರೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಅಪರಾಧ ಕೃತ್ಯಕ್ಕೆ ಬಳಸಿದ ಟಾಟಾ ಪಿಕ್‌ಅಪ್, ಡಿಸ್ಕವರ್ ಬೈಕ್ ಮತ್ತು ಪಲ್ಸರ್ ಬೈಕ್ ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News