ಜೂ.20ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಪಿಜಿಸಿಇಟಿ ತರಬೇತಿ

Update: 2019-06-18 17:06 GMT

ಮಂಗಳೂರು, ಜೂ.18: ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗವು ಜೂ.20ರಿಂದ 21ರವರೆಗೆ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಪಿಜಿಸಿಇಟಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಿದೆ.

ಮಂಗಳೂರಿನ ವಿದ್ಯಾರ್ಥಿಗಳಲ್ಲದೆ, ರಾಜ್ಯದ ವಿವಿಧೆಡೆಯಿಂದ ಸುಮಾರು 300 ಪದವೀಧರರು ತರಬೇತಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಪರಿಮಾಣ ವಿಶ್ಲೇಷಣೆ, ತಾರ್ಕಿಕ ಮತ್ತು ಸಾಮಾನ್ಯ, ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಪ್ರಾವೀಣ್ಯತೆ ಎಂಬ ನಾಲ್ಕು ಕ್ಷೇತ್ರಗಳಲ್ಲಿ ತರಬೇತಿ ನಡೆಸಲಾಗುವುದು.

ತರಬೇತಿಯಲ್ಲಿ ಭಾಗವಹಿಸುವವರಿಗೆ ಪಿಜಿಸಿಇಟಿ ಅಗತ್ಯಕ್ಕೆ ಅನುಗುಣವಾಗಿ ನಾಲ್ಕು ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಅಂಕಿತ್ ಎಸ್. ಕುಮಾರ್ ಮತ್ತು ಗುರು ಪ್ರಸಾದ್ ರಾವ್, ಬಾಹ್ಯ ಫೆಸಿಲಿಟರ್‌ಗಳಾದ ಉಡುಪಿಯ ವಿ-ರೀಚ್ ಕೋಚಿಂಗ್ ಅಕಾಡಮಿಯ ನಿರ್ದೇಶಕ ವಿವೇಕಾನಂದ್ ಕಾಮತ್ ಮತ್ತು ಸಿದ್ಧಾಂತ್ ಫೌಂಡೇಶನ್‌ನ ಸಿಇಒ ಮತ್ತು ತ್ರಿಶಾ ತರಗತಿಗಳ ಸ್ಥಾಪಕ ಗೋಪಾಲಕೃಷ್ಣ ಭಟ್ ಮುಂತಾದವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ಪಿಜಿಸಿಇಟಿಯ ಪ್ರೋಗ್ರಾಂ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಅನುಭವವನ್ನು ನೀಡಲು ಅಣಕು ಪರೀಕ್ಷೆಯನ್ನು ಸಹ ಒಳಗೊಂಡಿರುತ್ತದೆ. ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪಿಜಿಸಿಇಟಿ ಪ್ರಾಕ್ಟೀಸ್ ಬುಕ್ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News