ಜೂ.19: ಉಪ್ಪಿನಂಗಡಿ ಮಾಲಿಕುದ್ದಿನಾರ್ ಮಹಿಳಾ ಶರೀಅತ್ ಕಾಲೇಜು ಪ್ರಾರಂಭೋತ್ಸವ
Update: 2019-06-18 23:26 IST
ಉಪ್ಪಿನಂಗಡಿ: ಇಸ್ಲಾಮಿಕ್ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿರುವ ಮಾಲಿಕುದ್ದಿನಾರ್ ಮಹಿಳಾ ಶರೀಅತ್ ಕಾಲೇಜು ಪ್ರಾರಂಭೋತ್ಸವವು ಜೂ.19ರಂದು ಬೆಳಿಗ್ಗೆ 10 ಕ್ಕೆ ನಡೆಯಲಿದೆ.
ಅಸ್ಸಯ್ಯದ್ ಅನಸ್ ತಂಙಳ್ ಅಲ್ ಹಾದಿ ಗಂಡಿಬಾಗಿಲು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು ಮಾಲಿಕುದ್ದಿನಾರ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಮಾಜಿ ಕೆಂಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಬಿ ಮುಹಮ್ಮದ್ ದಾರಿಮಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಪ್ರಾಂಶುಪಾಲರಾದ ನಝೀರ್ ಅಝ್ಹರಿ ಬೊಳ್ಮಿನಾರ್ ಮತ್ತು ಪ್ರಾಧ್ಯಾಪಕರಾದ ಇಬ್ರಾಹಿಂ ಬಾತಿಷ್ ಅಝ್ಹರಿ ಹಿತವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಲಿಕುದಿನಾರ್ ಆಡಳಿತ ಸಮೀತಿಯ ಪಧಾದಿಕಾರಿಗಳು, ಹಲವಾರು ಉಲಮಾಗಳು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕರಾದ ಹಾಜಿ ಅಶ್ರಫ್ ಸಿಟಿ ತಿಳಿಸಿದ್ದಾರೆ.