ವಾಯುವ್ಯ ಜಪಾನ್‌ನಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

Update: 2019-06-18 18:19 GMT

ಟೋಕಿಯೊ,ಜೂ.18: ವಾಯುವ್ಯ ಜಪಾನ್‌ನಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಧಿಕಾರಿಗಳು ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಿದ್ದಾರೆ.

ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು,ಕೆಲ ಬುಲೆಟ್ ರೈಲು ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಯಾವುದೇ ಸಾವುನೋವು ಅಥವಾ ಆಸ್ತಿನಷ್ಟ ತಕ್ಷಣಕ್ಕೆ ವರದಿಯಾಗಿಲ್ಲ.

ಭೂಕಂಪದ ಕೇಂದ್ರಬಿಂದು ಯಾಮಾಗಾಟಾದ ಕರಾವಳಿಯಾಚೆ ಸಮುದ್ರದ ಮೇಲ್ಮೈಯಿಂದ ಆರು ಮೈಲು ಕೆಳಗೆ ಸ್ಥಿತಗೊಂಡಿತ್ತು ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಯಮಾಗಾಟಾ,ನಿಗಾಟಾ ಮತ್ತು ಇಷಿಕಾವಾ ತೀರಗಳಲ್ಲಿ ಸಂಭಾವ್ಯ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತೀರವಾಸಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ನಿಗಾಟಾದಲ್ಲಿನ ಪರಮಾಣು ಸ್ಥಾವರದಲ್ಲಿನ ಎಲ್ಲ ಏಳೂ ರಿಯಾಕ್ಟರ್‌ಗಳು ಮತ್ತು ಭೂಕಂಪ ಪೀಡಿತ ಪ್ರದೇಶದಲ್ಲಿಯ ಇತರ ಎರಡು ರಿಯಾಕ್ಟರ್‌ಗಳು ಸುರಕ್ಷಿತವಾಗಿವೆ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News