×
Ad

ದಾಯ್ಜಿವರ್ಲ್ಡ್ ವಾಹಿನಿಗೆ 5 ನೇ ವರ್ಷದ ಸಂಭ್ರಮ

Update: 2019-06-19 20:37 IST

ಮಂಗಳೂರು :  ದಾಯ್ಜಿವರ್ಲ್ಡ್ ಡಾಟ್ ಕಾಂನ ಸಹಸಂಸ್ಥೆ ದಾಯ್ಜಿವರ್ಲ್ಡ್ ಸುದ್ದಿವಾಹಿನಿ ಐದು ವಸಂತಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ೫ನೇ ವರ್ಷದ ಸಂಭ್ರಮೋತ್ಸವ ನಗರದ ಬೊಂದೇಲ್‌ನಲ್ಲಿರುವ ಕಚೇರಿಯಲ್ಲಿ ಜರುಗಿತು.  ದಾಯ್ಜಿವರ್ಲ್ಡ್‌ ವಾಹಿನಿ ನಿರ್ದೇಶಕ ಅಲೆಕ್ಸ್ ಕ್ಯಾಸ್ಟೆಲಿನೋ ಮತ್ತು ದಾಯ್ಜಿವರ್ಲ್ಡ್ ಡಾಟ್‌ಕಾಂನ ಆಡಳಿತ ನಿರ್ದೇಶಕ ಮೆಲ್ವಿನ್ ರೋಡ್ರಿಗಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಲೆಕ್ಸ್ ಕ್ಯಾಸ್ಟೆಲಿನೋ, ಇಂದು ದಾಯ್ಜಿವರ್ಲ್ಡ್ ವಾಹಿನಿ ಪ್ರತಿಯೊಬ್ಬರ ಮನೆ ಮಾತಾಗಿದ್ದು, ಎಲ್ಲರ ಅಚ್ಚುಮೆಚ್ಚಿನ ವಾಹಿನಿಯಾಗಿ ಮೂಡಿ ಬಂದಿದೆ. ಇದಕ್ಕೆ ವಾಹಿನಿಯ ಸಿಬ್ಬಂದಿಗಳ ಶ್ರಮವೇ ಕಾರಣವಾಗಿದೆ. ಎಲ್ಲರೂ ಒಟ್ಟು ಸೇರಿ ಶ್ರಮಪಟ್ಟ ಫಲದಿಂದ ಇಂದು ನಮ್ಮ ಸುದ್ದಿವಾಹಿನಿ ಅತ್ಯುತ್ತಮ ಹೆಸರುಗಳಿಸಲು ಸಾಧ್ಯವಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿ ಮುಂದೆಯೂ ಎಲ್ಲರ ಸಹಕಾರವನ್ನು ಕೋರಿದರು. ನಂತರ ಮೆಲ್ವಿನ್ ರೋಡ್ರಿಗಸ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಲಾರೆನ್ಸ್, ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ ಲಿ.ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತೌವ್ರೋ, ಹ್ಯೂಮನ್ ರಿಸೋರ್ಸ್ ಡೈರೆಕ್ಟರ್ ರೊನಾಲ್ಡ್ ನಜರೆತ್, ದಾಯ್ಜಿವರ್ಲ್ಡ್‌ವಾಹಿನಿ ಪ್ರೊಡಕ್ಷನ್ ಡೈರೆಕ್ಟರ್ ಆಶಿತ್ ಪಿಂಟೋ, ಪ್ರೊಡಕ್ಷನ್ ಮ್ಯಾನೇಜರ್ ಮೊಹ್ಮದ್ ನಿಸಾರ್, ಸುದ್ದಿವಿಭಾಗದ ಮುಖ್ಯಸ್ಥ ಚಂದ್ರಶೇಖರ ಅರಿಬೈಲು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News