ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಅರ್ಜಿ ತಿರಸ್ಕರಿಸಿದ ಎನ್ ಐಎ ನ್ಯಾಯಾಲಯ

Update: 2019-06-20 10:55 GMT

ಹೊಸದಿಲ್ಲಿ, ಜೂ.20: 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಾರಕ್ಕೊಮ್ಮೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಬಿಜೆಪಿ ಸಂಸದೆ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಎನ್ ಐಎ ನ್ಯಾಯಾಲಯ ತಿರಸ್ಕರಿಸಿದೆ.

ಅನಾರೋಗ್ಯ, ದೂರ, ಭದ್ರತೆ, ಸಂಸತ್ ನಲ್ಲಿ ಭಾಗವಹಿಸುವಿಕೆ ಎನ್ನುವ ಕಾರಣಗಳನ್ನು ಮುಂದಿಟ್ಟು ಪ್ರಜ್ಞಾ ಸಿಂಗ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ. ಆದರೆ ಇಂದು ಕೋರ್ಟ್ ಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.

ಸಂಸತ್ ನಲ್ಲಿ ಭಾಗವಹಿಸುವ ಕುರಿತಾಗಿ ಬಿಜೆಪಿ ಸಂಸದರಿಗೆ ವಿಪ್  ಜಾರಿಗೊಳಿಸಿದೆ ಎಂದು ಪ್ರಜ್ಞಾ ಸಿಂಗ್ ರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News