ಮುದರಂಗಡಿ: ಕೊಳವೆಬಾವಿಗಳ ಪುನಶ್ಚೇತನಕ್ಕೆ ಚಾಲನೆ

Update: 2019-06-20 14:51 GMT

ಪಡುಬಿದ್ರೆ, ಜೂ.20: ಅದಾನಿ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದು, ಈ ಕುರಿತು ಪಂಚಾಯತ್‌ಗೆ ಧೃಢೀಕರಣ ಪತ್ರವನ್ನು ಜೂ.17ರಂದು ಹಸ್ತಾಂತರಿಸಲಾಯಿತು.

ಮುದರಂಗಡಿ ಪಂಚಾಯತ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಅವರಿಗೆ ಧೃಢೀಕಣ ಪತ್ರವನ್ನು ಹಸ್ತಾಂತರಿಸಿದರು.

ಗ್ರಾಮದ ನಿವಾಸಿಗಳಿಗೆ ನೀರಿನ ಕೊರತೆಯನ್ನು ನಿವಾರಿಸಲು ಈ ಕಾರ್ಯ ಕ್ರಮವು ಒಂದು ಉತ್ತಮ ಯೋಜನೆಯಾಗಲಿದೆ. ಗ್ರಾಪಂ ವ್ಯಾಪ್ತಿಯ ಒಟ್ಟು 10 ಬೋರ್‌ವೇಲ್‌ಗಳನ್ನು ಪುನಶ್ಚೇತನಗೊಳಿಸಲಾಗುವುದು. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಿಶೋರ್ ಆಳ್ವ ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್, ಗ್ರಾಪಂ ಉಪಾಧ್ಯಕ್ಷ ಜಯಂತಿ ಪೂಜಾರ್ತಿ, ಸದಸ್ಯರಾದ ಶೋಭಾ ಫೆರ್ನಾಂಡಿಸ್, ವಿನೋದಾ ಪೂಜಾರ್ತಿ, ಗೆಬ್ರಿಯಲ್ ಮಥಾಯಿಸ್, ಗ್ರಾಮಸ್ಥರಾದ ಜಯಂತ್ ಪೂಜಾರಿ, ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ೌಂಡೇಶನ್‌ನ ಸಿಬ್ಬಂದಿಗಳಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಧೀರಜ್ ದೇವಾಡಿಗ, ಶಿವಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News