×
Ad

ರಾಷ್ಟ್ರೀಯ ಯುವ ಕಾರ್ಯಕರ್ತರ ನೇಮಕಕ್ಕೆ ನೇರ ಸಂದರ್ಶನ

Update: 2019-06-20 22:01 IST

ಉಡುಪಿ, ಜೂ.20: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದಡಿ ನೆಹರು ಯುವ ಕೇಂದ್ರವು ಜಿಲ್ಲೆಗೆ 2019-20ನೇ ಸಾಲಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ ಯೋಜನೆಯಡಿಪ್ರತಿ ತಾಲೂಕಿಗೆ ಇಬ್ಬರಂತೆ (ಉಡುಪಿಯ 7ತಾಲೂಕುಗಳಿಗೆ) ಅಭ್ಯರ್ಥಿಗಳನ್ನು ನೇಮಕ ಮಾಡಲಿದೆ.

ಎಸೆಸೆಲ್ಸಿ/ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿರುವ 29 ವರ್ಷ ದೊಳಗಿನ ಯುವಕ-ಯುವತಿಯರು ನೇಮಕಾತಿಗೆ ಅರ್ಹರು. ನೇಮಕಗೊಂಡ ಅಭ್ಯರ್ಥಿಗಳಿಗೆ 5,000 ರೂ. ಮಾಸಿಕ ಗೌರವಧನ ನೀಡಲಾಗುವುದು.

ಈ ಬಗ್ಗೆ ನೇರ ಸಂದರ್ಶನವು ಜೂ.27ರಂದು ಬೆಳಗ್ಗೆ 10 ಗಂಟೆಗೆ ನೆಹರು ಯುವ ಕೇಂದ್ರ, ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಬಳಿ, ಜಿಲ್ಲಾಧಿಕಾರಿ ಕಛೇರಿ ಆವರಣ, ರಜತಾದ್ರಿ, ಮಣಿಪಾಲ ಇಲ್ಲಿ ನಿಗದಿ ಯಾಗಿದ್ದು, ಅರ್ಹ, ಆಸಕ್ತಿ ಇರುವ ಅ್ಯರ್ಥಿಗಳು ಬೇಕಾದ ಎಲ್ಲಾ ದಾಖಲೆಗಳ ಮೂಲ ಪ್ರತಿಯೊಂದಿೆ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0820-2574992ನ್ನು ಸಂಪರ್ಕಿ ಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News