ಮುರ್ಸಿ ಸಾವನ್ನು ರಾಜಕೀಯಗೊಳಿಸಲು ವಿಶ್ವಸಂಸ್ಥೆ ಯತ್ನ: ಈಜಿಪ್ಟ್ ಆರೋಪ

Update: 2019-06-20 16:35 GMT

 ಕೈರೋ, ಜೂ. 20: ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಈಜಿಪ್ಟ್‌ನ ಮೊದಲ ಅಧ್ಯಕ್ಷ ಮುಹಮ್ಮದ್ ಮುರ್ಸಿಯ ಸಾವಿನ ಬಗ್ಗೆ ‘ಸ್ವತಂತ್ರ ತನಿಖೆ’ಗೆ ಕರೆ ನೀಡುವ ಮೂಲಕ ಅವರ ಸಾವನ್ನು ‘ರಾಜಕೀಕರಣಗೊಳಿಸಲು’ ವಿಶ್ವಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಈಜಿಪ್ಟ್ ಆರೋಪಿಸಿದೆ.

ಮುರ್ಸಿ ಸೋಮವಾರ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯ ಬಗ್ಗೆ ಸ್ವತಂತ್ರ ತನಿಖೆಯಾಗಬೇಕೆಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ವಕ್ತಾರ ರೂಪರ್ಟ್ ಕಾಲ್ವಿಲ್ ಕರೆ ನೀಡಿರುವುದನ್ನು ತಾನು ಪ್ರಬಲ ಪದಗಳಲ್ಲಿ ಖಂಡಿಸುವುದಾಗಿ ಈಜಿಪ್ಟ್ ವಿದೇಶ ಸಚಿವಾಲಯದ ವಕ್ತಾರ ಅಹ್ಮದ್ ಹಫೀಝ್ ಹೇಳಿದರು.

 ‘‘ಇದು ಸಹಜ ಸಾವನ್ನು ರಾಜಕೀಕರಣಗೊಳಿಸುವ ಉದ್ದೇಶಪೂರ್ವಕ ಯತ್ನ’’ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News