ಐಎಎಫ್‌ನ ಎಎನ್-32 ವಿಮಾನ ಪತನ ಸ್ಥಳದಲ್ಲಿ 6 ಮೃತದೇಹ, 7 ಅವಶೇಷಗಳು ಪತ್ತೆ

Update: 2019-06-20 16:37 GMT

ಹೊಸದಿಲ್ಲಿ, ಜೂ. 20: ಜೂನ್ 3ರಂದು ಭಾರತೀಯ ವಾಯು ಪಡೆಯ ಎಎನ್-32 ವಿಮಾನ ಪತನವಾದ ಸ್ಥಳದಿಂದ ಆರು ಮೃತದೇಹಗಳು ಹಾಗೂ 7 ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ.

ಭಾರತೀಯ ವಾಯು ಪಡೆ, ಸೇನಾ ಪಡೆ ಹಾಗೂ ಅರುಣಾಚಲ ಪ್ರದೇಶದ ನಾಗರಿಕ ಆಡಳಿತ ಬುಧವಾರ ವಿಮಾನ ಪತನವಾದ ಸ್ಥಳದಲ್ಲಿ ಸಾಮೂಹಿಕ ಕಾರ್ಯಾಚರಣೆ ನಡೆಸಿತ್ತು. ಐಎಎಫ್‌ನ ಜಂಟಿ ತಂಡಗಳು, ಸೇನೆ ಹಾಗೂ ನಾಗರಿಕ ಆಡಳಿತ ವೈಮಾನಿಕ ಸಮೀಕ್ಷೆ ನಡೆಸಿದ ಸಂದರ್ಭ ಮಂಗಳವಾರ ಅಪರಾಹ್ನ ವಿಮಾನಗಳ ಅವಶೇಷಗಳು ಪತ್ತೆಯಾಗಿತ್ತು. ಶಿ ಯೋಮಿ ಜಿಲ್ಲೆಯ ಪಾಯುಮ್ ವಲಯದ ವ್ಯಾಪ್ತಿಯ ಗಟ್ಟೆಯ 12ರಿಂದ 15 ಕಿ.ಮೀ. ಪಶ್ಚಿಮದಲ್ಲಿ ಹಾಗೂ ಲಿಪೋದಿಂದ 16 ಕಿ.ಮೀ. ಉತ್ತರದಲ್ಲಿ ಎಎನ್-32 ವಿಮಾನದ ಅವಶೇಷ ಪತ್ತೆಯಾಗಿತ್ತು.

ಪತನಗೊಂಡು ಎಎನ್-32 ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ವಿಮಾನ ಪತನವಾಗಲು ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಭಾರತೀಯ ವಾಯು ಪಡೆಗೆ ಇನ್ನಷ್ಟು ಸಮಯ ಹಿಡಿದುಕೊಳ್ಳಬಹುದು.

 ವಿಮಾನ ಪತನಗೊಂಡ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ವಿಮಾನ ಪತನದ ಸಂದರ್ಭ ಬ್ಲಾಕ್ ಬಾಕ್ಸ್ ಜಖಂಗೊಂಡಿದೆ. ಬ್ಲಾಕ್ ಬಾಕ್ಸ್‌ನ ದತ್ತಾಂಶವನ್ನು ಸಂಗ್ರಹಿಸಲು ಅದನ್ನು ಎಚ್‌ಎಎಲ್‌ಗೆ ಕಳುಹಿಸಬೇಕೇ ? ಅಥವಾ ಇತರ ಸಂಸ್ಥೆಗೆ ಕಳುಹಿಸಬೇಕೇ ? ಎಂಬ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News