ಉಪ್ಪಿನಂಗಡಿ: ಮಾಲಿಕುದ್ದಿನಾರ್ ಮಹಿಳಾ ಶರೀಅತ್ ಕಾಲೇಜ್ ಪ್ರಾರಂಭೋತ್ಸವ

Update: 2019-06-20 17:24 GMT

ಉಪ್ಪಿನಂಗಡಿ : ಮಾಲಿಕುದ್ದಿನಾರ್ ಮಹಿಳಾ ಶರೀಅತ್ ಕಾಲೇಜಿನ ಪ್ರಾರಂಭೋತ್ಸವವು ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆಯಲ್ಲಿ ನಡೆಯಿತು.

ಅಸ್ಸಯ್ಯದ್ ಅನಸ್ ತಂಙಳ್ ಅಲ್ ಹಾದಿ ಗಂಡಿಬಾಗಿಲು ದುವಾಶಿರ್ವಚನ ನೀಡಿ, ನೂತನ ವರ್ಷದ ತರಗತಿಗೆ ಚಾಲನೆ ನೀಡಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಎಸ್ ಬಿ ಮುಹಮ್ಮದ್ ದಾರಿಮಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಲುವಾಗಿ ಮಹಿಳಾ ಶರೀಆತ್ ಕಾಲೇಜುಗಳು ನಿರ್ವಹಿಸಬೇಕಿದೆ ಮತ್ತು ಇಸ್ಲಾಂ ಮಹಿಳೆಗೆ ಉತ್ತಮ ಸ್ಥಾನವನ್ನು ನೀಡಿದೆ ಎಂದರು.

ಸಭೆಯ ಉದ್ಘಾಟನೆಯನ್ನು ನಿರ್ವಹಿಸಿದ ಕಾಲೇಜಿನ ಪ್ರಾಧ್ಯಾಪಕ ನಝೀರ್ ಅಝ್ಹರಿ ಆಧುನಿಕ ಜಗತ್ತಿನಲ್ಲಿ ಮುಸ್ಲಿ ಯುವ ಸಮಾಜವು ಕೆಡುಕಿನತ್ತ ಮುಖ ಮಾಡುತ್ತಿರುವುದು ಆತಂಕದ ವಿಷಯವಾಗಿದೆ .ಅದರಿಂದ ಅವರನ್ನು ಸರಿದಾರಿಗೆ ತರಲು ಮಹಿಳೆಯರು ಸುಶೀಕ್ಷತ ಧಾರ್ಮಿಕ ಪ್ರಜ್ಞೆ ಇರುವ ಕುಂಟುಂಬಿನಿಗಳಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಚರಿಸುತ್ತಿರುವ ಶರೀಅತ್ ಕಾಲೇಜಿನ ಅಡಳಿತ ಮಂಡಳಿಯ ಚಟುವಟಿಕೆಗಳು ಅಭಿನಂದನೀಯ ಎಂದು ಹೇಳಿದರು.

ಸಭೆಯಲ್ಲಿ ಜಮಾಅತ್ ಕಾರ್ಯದರ್ಶಿ ಅಬ್ದುಶ್ಶುಕೂರ್ ಶುಕ್ರಿಯ, ಮಹೀಳಾ ಶರೀಅತ್ ಕಾಲೇಜು ಸಂಚಾಲಕರಾದ ಸಿಟಿ ಅಶ್ರಫ್ ಹಾಜಿ , ಉಪಾಧ್ಯಕ್ಷರಾದ  ಹಾರೂನ್ ಹಾಜಿ, ಜೊತೆ ಕಾರ್ಯದರ್ಶಿಗಳಾದ ಯೂಸುಫ್ ಹಾಜಿ ಎಚ್ ,ಎಣ್ಮಾಡಿ ಯೂಸುಫ್ ಹಾಜಿ, ಕೋಶಾಧಿಕಾರಿ ಮುಸ್ತಫಾ , ಸದಸ್ಯರಾದ ಮುಹಮ್ಮದ್ ಕೂಟೇಲು, ಕರಾವಳಿ ಹಮೀದ್,ಅಬ್ಬಾಸ್ ನಿನ್ನಿಕಲ್ಲು, ಅಝೀಝ್ ನಿನ್ನಿಕಲ್ಲು, ಹಿಫ್ಳ್ ಕಾಲೇಜಿನ ಪ್ರಾಧ್ಯಾಪಕರಾದ ಹಸೈನಾರ್ ಇಂದಾದಿ ಮತ್ತು ಮದರಸ ಶಿಕ್ಷಕರು, ರಕ್ಷಕರು ವಿಧ್ಯಾರ್ಥಿನಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಮಹಿಳಾ ಶರೀಅತ್ ಕಾಲೇಜಿನ ಪ್ರಾಧ್ಯಪಕರಾದ ಇಬ್ರಾಹಿಂ ಬಾತಿಷಾ ಅಝ್ಹರಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News