ವಿಟ್ಲ ಅಲ್‍ಖೈರ್ ಮಹಿಳಾ ಶರೀಯತ್ ಕಾಲೇಜಿನ ಪ್ರಾರಂಭೋತ್ಸವ

Update: 2019-06-20 17:32 GMT

ಬಂಟ್ವಾಳ, ಜೂ. 20: ವಿಟ್ಲ ಮೇಗಿನಪೇಟೆ ಅಲ್‍ಖೈರ್ ಮಹಿಳಾ ಶರೀಯತ್ ಕಾಲೇಜಿನ ಪ್ರಾರಂಭೋತ್ಸವ ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಲೇಜು ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಫೈಝಿ ಪರ್ತಿಪ್ಪಾಡಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಧರ್ಮದ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ವಿದ್ಯಾರ್ಥಿಗಳು ಧರ್ಮದ ಚೌಕಟ್ಟನ್ನು ಮೀರಿ ವರ್ತಿಸುತ್ತಿದ್ದಾರೆ. ಧರ್ಮದ ನೈಜತೆಯನ್ನು ಅರಿಯಲು ಶರೀಯತ್ ಕಾಲೇಜುಗಳ ಮೂಲಕ ಸಾಧ್ಯವಿದೆ. ಧರ್ಮದ ಚೌಕಟ್ಟಿನಲ್ಲಿ ಬದುಕಲು ಶರೀಯತ್ ಕಾಲೇಜುಗಳು ಪ್ರೇರಣೆಯಾಗಿದೆ. ಇಂತಹ ಕಾಲೇಜುಗಳ ಮೂಲಕ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು. 

ಕಾಲೇಜು ಅಧ್ಯಾಪಕರಾದ ಅಬ್ಬಾಸ್ ದಾರಿಮಿ ಕೆಲಿಂಜ, ಇಬ್ರಾಹಿಂ ಫೈಝಿ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಮುಹಮ್ಮದ್ ಹಾಜಿ ಎ.ಎಸ್. ಮಾರ್ಟ್, ಮುಹಮ್ಮದ್ ಗಮಿ, ಇಕ್ಬಾಲ್ ಶೀತಲ್, ಕರೀಂ ಕೆಲಿಂಜ, ಶರೀಫ್ ಮೂಸಾ ಕುದ್ದುಪದವು, ಮುಹಮ್ಮದ್ ಅಲಿ ವಿಟ್ಲ ಉಪಸ್ಥಿತರಿದ್ದರು. 

ಕಾರ್ಯದರ್ಶಿ ಸಫ್ವಾನ್ ಮುಹಮ್ಮದ್ ಸ್ವಾಗತಿಸಿದರು. ವ್ಯವಸ್ಥಾಪಕ ಹಕೀಂ ಅರ್ಶದಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News