ಮುಂದಿನ ವಾರದಿಂದ ವೆಬ್ ಮೂಲಕ ನೋಂದಣಿಗೆ ವ್ಯವಸ್ಥೆ: ಜಿಲ್ಲಾಧಿಕಾರಿ ಸಿಕಾಂತ್ ಸೆಂಥಿಲ್

Update: 2019-06-20 17:35 GMT

ಮಂಗಳೂರು, ಜೂ.20: ನಗರ ಆಸ್ತಿ ಮಾಲಕತ್ವದ ಹಕ್ಕು ದಾಖಲೆಗಳ ಯೋಜನೆ (ಯುಪಿಓಆರ್) ಪ್ರಾಪರ್ಟಿ ಕಾರ್ಡ್ ಬಗ್ಗೆ ಜನರು ಅನಗತ್ಯ ಗೊಂದಲ ಅಥವಾ ಆತುರ ಪಡುವ ಅಗತ್ಯವಿಲ್ಲ. ಆಸ್ತಿಯ ಮಾರಾಟಕ್ಕೆ ನೋಂದಣಿ ಮಾಡುವ ಸಂದರ್ಭದಲ್ಲಿ ಮಾತ್ರವೇ ಸದ್ಯ ಕಡ್ಡಾಯ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರತಿದಿನ 80ರಿಂದ 100ರಷ್ಟು ಸದ್ಯ ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಪ್ರಾಪರ್ಟಿ ಕಾರ್ಡ್ ಕೋರಿ ಅರ್ಜಿ ಸಲ್ಲಿಸುವವರ ಪೈಕಿ ಎಲ್ಲಾ ದಾಖಲೆಗಳು ಸರಿ ಇದ್ದಲ್ಲಿ ಈಗಾಗಲೇ ಅಳತೆಯಾಗಿರುವ ಆಸ್ತಿಗಳಿಗೆ ಕರಡು ಪ್ರಾಪರ್ಟಿ ಕಾರ್ಡನ್ನು 48 ಗಂಟೆಯೊಳಗೆ ನೀಡಲಾಗುತ್ತದೆ. ಅಳತೆ ಆಗದೆ ಇರುವ ಕಡತಗಳಲ್ಲಿ 10 ದಿನಗಳಲ್ಲಿ ಅಳತೆ ನಡೆಸಿ ಕಾರ್ಡ್ ವಿತರಿಸುವ ಕಾರ್ಯ ನಡೆಯುತ್ತಿದೆ. ತಮ್ಮ ಆಸ್ತಿಯ ಮಾರಾಟಕ್ಕೆ ನೋಂದಣಿ ಮಾಡುವ ಸಂದರ್ಭದಲ್ಲಿ ಹೊರತು ಪಡಿಸಿ ಪ್ರಾಪರ್ಟಿ ಕಾರ್ಡ್‌ಗಾಗಿ ಕೇಂದ್ರದಲ್ಲಿ ಸರತಿ ನಿಲ್ಲುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ನೀವು ಮಾಡಿಲ್ಲದಿದ್ದರೂ ನಾವೇ ಮಾಡಿಸುತ್ತೇವೆ !

ಮಂಗಳೂರು ಯುಪಿಓಆರ್ ಯೋಜನೆಗೆ ಒಳಪಡುವ 32 ಗ್ರಾಮಗಳಲ್ಲಿ ಜೂನ್ 10ರಿಂದ ನೋಂದಣಿ ಉದ್ದೇಶಕ್ಕೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಒಟ್ಟು 153466 ಆಸ್ತಿಗಳಲ್ಲಿ 88031 ಆಸ್ತಿಗಳ ದಾಖಲೆ ಸಂಗ್ರಹಿಸಲಾಗಿದೆ. 41579 ಆಸ್ತಿಗಳ ಕರಡು ಪಿ.ಆರ್. ಕಾರ್ಡ್ ಅನುಮೋದಿಸಲಾಗಿದ್ದು, 28584 ಕರಡು ಕಾರ್ಡ್‌ಗಳನ್ನು ವಿತರಿಸಲಾಗಿದೆ. 28274 ಅಂತಿಮ ಪಿಆರ್ ಕಾರ್ಡ್ ಅನುಮೋದಿಸಲಾಗಿದ್ದು, 22206 ಅಂತಿಮ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಒಂದು ವಾರದೊಳಗೆ ನೋಂದಣಿಯಾದ ಆಸ್ತಿಗಳಲ್ಲಿ ದಾಖಲೆ ಸಂಗ್ರಹಿಸಲಾದ ಆಸ್ತಿಗಳಿಗೆ ಸಂಬಂಧಿಸಿ ಪಿಆರ್ ಕಾರ್ಡ್ ಒದಗಿಸಲು ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಮುಂದಿನ ವಾರದೊಳಗೆ ವೆಬ್ ವ್ಯವಸ್ಥೆಯ ಮೂಲಕ ಖುದ್ದು ಆಸ್ತಿ ಮಾಲಕರೇ ತಮ್ಮ ಆಸ್ತಿಯನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗು ವುದು. ಹಾಗಾಗಿ ಯಾರೂ ಪ್ರಾಪರ್ಟಿ ಕಾರ್ಡ್‌ಗಾಗಿ ಆತುರ ಪಡುವ ಅಗತ್ಯವಿಲ್ಲ. ಯಾರಾದರೂ ಪ್ರಾಪರ್ಟಿ ಕಾರ್ಡ್ ಮಾಡಿಸಿಲ್ಲದಿದ್ದರೆ ನಾವೇ ಮಾಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಜಿಲಾ್ಲಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News