ಗ್ರಾಮಚಾವಡಿ: ಮದ್ಯದಂಗಡಿ ಮುಚ್ಚಲು ಒತ್ತಾಯಿಸಿ ನಾಗರಿಕರಿಂದ ಪ್ರತಿಭಟನೆ; ಮುತ್ತಿಗೆ

Update: 2019-06-21 12:58 GMT

ಕೊಣಾಜೆ: ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಚಾವಡಿ ಬಳಿ ನೂತನವಾಗಿ ನಿರ್ಮಾಣ ಗೊಂಡ ಮದ್ಯದಂಗಡಿಯನ್ನು ಕೂಡಲೇ ಬಂದ್ ಗೊಳಿಸುವಂತೆ ಆಗ್ರಹಿಸಿ ಹರೇಕಳ ನಾಗರಿಕ ಸಮಿತಿಯ ನೇತ್ರತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ನಾಗರಿಕ ಸಮಿತಿಯ ಝಾಹಿದ್ ಮಲಾರ್ ಮಾತನಾಡಿ ಗ್ರಾಮಚಾವಡಿ ಪ್ರದೇಶವು ಮೂರು ಗ್ರಾಮ, ಎರಡು ತಾಲೂಕುಗಳನ್ನು ಸಂಪರ್ಕಿಸುವ ಪ್ರದೇಶವಾಗಿದೆ ಮಾತ್ರವಲ್ಲದೆ ಇಲ್ಲಿಯ ಜನರು ಸೌಹಾರ್ದ ತೆಯಿಂದ ಬಾಳುತ್ತಿದ್ದಾರೆ. ಅಲ್ಲದೆ  ಮದ್ಯದಂಗಡಿ ಆರಂಭಗೊಂಡಿರುವ ಕಟ್ಟಡದಲ್ಲಿ ಶಿಕ್ಷಣ ಸಂಸ್ಥೆಯೂ ಇದೆ. ಅಬಕಾರಿ ಇಲಾಖೆಯ ಷಡ್ಯಂತ್ರದೊಂದಿಗೆ ಇಲ್ಲಿ ಮದ್ಯದಂಗಡಿಗೆ ಪರ್ಮಿಷನ್ ನೀಡಲಾಗಿದ್ದು, ಕೂಡಲೇ ಮದ್ಯದಂಗಡಿಯನ್ನು ಬಂದ್ ಗೊಳಿಸದಿದ್ದರೆ ನಾವೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಳಿಕ ಸಮಿತಿಯ ಸದಸ್ಯರು ಹರೇಕಳ‌ ಗ್ರಾಮ  ಪಂಚಾಯಿತಿ‌ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಗೆ ಪೊಲೀಸರು ಬಂದೋ‌ಬಸ್ತ್ ಏರ್ಪಡಿಸಲಾಗಿದ್ದರೂ ಒಂದು ಹಂತದಲ್ಲಿ‌ ಆಕ್ರೋಶಿತ ನಾಗರಿಕರು ಮದ್ಯದಂಗಡಿಗೆ ಮುತ್ತಿಗೆ ಹಾಕಿ‌ ಬೀಗ ಹಾಕಿದರು.

ಈ ಸಂದರ್ಭದಲ್ಲಿ ರಫೀಕ್ ಹರೇಕಳ, ಬಶೀರ್ ಬಿ.ಎಂ, ನೌಫಲ್, ಶಾಹುಲ್ ಹಮೀದ್, ಮುನೀರ್. ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿ ದ್ದರು. ಸ್ಥಳದಲ್ಲಿ ಕೊಣಾಜೆ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ‌ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News