ಮಣಿಪಾಲದಲ್ಲಿ ಮಾಹೆಯಿಂದ ಯೋಗ ದಿನಾಚರಣೆ

Update: 2019-06-21 15:07 GMT

ಮಣಿಪಾಲ, ಜೂ.21: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಯೋಗ ವಿಭಾಗವು, ಸೆಂಟರ್ ಫಾರ್ ಇಂಟರ್‌ಗ್ರೇಟಿವ್ ಮೆಡಿಸಿನ್ ಎಂಡ್ ರಿಸರ್ಚ್‌ನ ಸಹಯೋಗದೊಂದಿಗೆ ಮಣಿಪಾಲದ ಮೆರೆನಾ ಒಳಾಂಗಣ ಕ್ರೀಡಾಂಗಣದಲ್ಲಿ ಮಾಹೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು.

ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಅವರು ಯುಜಿಸಿಯ ಮಾರ್ಗದರ್ಶಿ ಸೂತ್ರದಂತೆ ಯೋಗದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಯೋಗ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಅವರು ಯೋಗದಲ್ಲಿರುವ ವಿವಿಧ ಆಸನಗಳನ್ನು ತಿಳಿಸಿದರು. ಬಳಿಕ ಪ್ರಾಣಾಯಾಮದ ವಿಧಿಗಳನ್ನು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ನಿತ್ಯ ಬದುಕಿನಲ್ಲಿ ಯೋಗದ ಅಗತ್ಯತೆ ಹಾಗೂ ಇದರಿಂದ ಜೀವನದ ಗುಣಮಟ್ಟವನ್ನು ಹೇಗೆ ಉತ್ತಮ ಪಡಿಸಿಕೊಳ್ಳ ಬಹುದು ಎಂಬುದನ್ನು ವಿವರಿಸಿದರು.

ಮಾಹೆಯ ಸಂಶೋಧನಾ ನಿರ್ದೇಶಕ (ಲೈಫ್ ಸಾಯನ್ಸ್) ಅತಿಥಿಗಳನ್ನು ಸ್ವಾಗತಿಸಿದರೆ, ಯೋಗ ವಿಭಾಗದ ಪ್ರಾಧ್ಯಾಪಕಿ ನೀತು ಸಿನ್ಹಾ ವಂದಿಸಿದರು. ಎಂಎಸ್ಸಿ ಯೋಗ ಥೆರಪಿ ವಿಭಾಗದ ವಿದ್ಯಾರ್ಥಿಗಳು ಯೋಗದ ಆಕರ್ಷಕ ಪ್ರದರ್ಶನ ನೀಡಿದರು.

ಯೋಗದ ಕುರಿತಂತೆ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಕೆಎಂಸಿಯ ಸಿಓಓ ಸಿ.ಜಿ.ಮುತ್ತಣ್ಣ, ಕೆಎಂಸಿಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ ಹೆಗ್ಡೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News