ಉಡುಪಿ: ರಾಜಾಂಗಣದಲ್ಲಿ ಅಂ.ರಾ.ಯೋಗ ದಿನಾಚರಣೆ

Update: 2019-06-21 15:08 GMT

ಉಡುಪಿ, ಜೂ.21: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ ಉಡುಪಿ ಜಿಲ್ಲೆ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಶ್ರೀವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ ಉಡುಪಿ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ, ಸಿದ್ಧ ಸಮಾಧಿಯೋಗ ಉಡುಪಿ, ಶ್ರೀ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಇವುಗಳ ಸಂಯುಕ್ತ ಆಶ್ರಯದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುಕ್ರವಾರ ನಡೆಯಿತು.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಏಕಾದಶಿಯ ಉಪವಾಸವನ್ನಾದರೂ ಬಿಡಬಹುದು, ಯೋಗವನ್ನು ಬಿಟ್ಟಂತಹ ದಿನ ನಮ್ಮ ಬದುಕಿನಲ್ಲಿ ಬಾರದಿರಲಿ. ಯೋಗಾಸನವು ನಮ್ಮ ದಿನಚರಿಯ ಒಂದು ಭಾಗವಾಗಿರಲಿ ಎಂದರು.

ಪತಂಜಲಿ ಸಂಸ್ಥೆ ಹರಿದ್ವಾರದಲ್ಲಿ ಯೋಗಕೇಂದ್ರವನ್ನು ಸ್ಥಾಪಿಸಿ ವಿಶ್ವದಲ್ಲಿ ಯೋಗವನ್ನು ಪಸರಿಸಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ವಾಮೀಜಿ ನುಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಸಂಸ್ಥೆಯ ವತಿಯಿಂದ ರಾಜಾಂಗಣದಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಆಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News