ಕುಂಜಾರುಗಿರಿ ಬೆಟ್ಟದಲ್ಲಿ ಯೋಗ ದಿನಾಚರಣೆ

Update: 2019-06-21 15:09 GMT

ಉಡುಪಿ, ಜೂ.21: ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಕುಂಜಾರುಗಿರಿ ಬೆಟ್ಟದಲ್ಲಿ ವಿಶ್ವ ಯೋಗ ದಿನವನ್ನು ಇಂದು ಆಚರಿಸಲಾಯಿತು.

ಸಮುದ್ರ ಮಟ್ಟಕ್ಕಿಂತ 100 ಅಡಿಗಳಷ್ಟು ಎತ್ತರವಿರುವ ಈ ಐತಿಹಾಸಿಕ ಪ್ರದೇಶದಲ್ಲಿ ಇಂದು ಮುಂಜಾನೆ 6:30ಕ್ಕೆ ಸೂರ್ಯ ನಮಸ್ಕಾರ, ತ್ರಿಕೋನಾಸನ, ಅರ್ಧಕಟಿ ಚಕ್ರಾಸನ, ವೀರಭದ್ರಾಸನ, ವ್ರಕ್ಷಾಸನ ಸಹಿತ ಇತರ ಆಸನಗಳನ್ನು ಮಾಡಲಾಯಿತು.

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆ ಯೋಗ. ಮನುಷ್ಯ ಸಂಸ್ಕಾರವಂತನಾಗಿ ಬೆಳೆಯಲು ಯೋಗದ ಪಾತ್ರವು ಬಹಳಷ್ಟಿದೆ. ಯೋಗದಿಂದ ಮನೋನಿಗ್ರಹ ಬೆಳೆಸಿಕೊಳ್ಳುವ ಮೂಲಕ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಸನ ಹೊಂದುವ ಮೂಲಕ ಸಮಾಜ ಒಳಿತಿಗಾಗಿ ಪರಿಣಾಮಕಾರಿಯಾಗಿ ಶ್ರಮಿಸುವ ಮನಸ್ಥಿತಿ ಬೆಳೆಯುತ್ತದೆ ಎಂದರು.

ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು, ಗಣೇಶ್ ಪ್ರಸಾದ್, ಸಂತೋಷ್ ನಾಯ್ಕ್, ಪವನ್ ಮೂಡುಬೆಳ್ಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News