ಕಲೆ ಬದುಕಿನ ಆಸಕ್ತಿಯ ಪ್ರತಿನಿಧಿ: ಎಂ.ಎಸ್.ಭಟ್

Update: 2019-06-21 15:10 GMT

ಮಲ್ಪೆ, ಜೂ.21: ಅಮೂಲ್ಯವಾದ ಅಂತಃಸತ್ವವನ್ನು ಹೊಂದಿರುವ ಕಲೆಯು ಬದುಕು ಮತ್ತು ಬದುಕಿನ ಆಸಕ್ತಿಯನ್ನು ಪ್ರತಿನಿಧಿಸುತ್ತದೆ. ಸುಪ್ತ ಪ್ರತಿಭೆಗಳ ಭವಿಷ್ಯ ನಿರ್ಮಾಣಕ್ಕೂ ಕಾರಣವಾಗುತ್ತದೆ. ಸಾಕಷ್ಟು ಆಯಾಮಗಳಲ್ಲಿ ಮಹತ್ವ ವನ್ನು ಹೊಂದಿರುವ ಕಲೆಯು ಸೂಕ್ತ ಮಾರ್ಗದರ್ಶನ ಮತ್ತು ನಿರಂತರ ಕಲಿಕೆಯಿಂದ ಪರಿಣಾಮಕಾರಿಯಾಗಿ ಪ್ರಕಟಗೊಳ್ಳಲು ಸಾಧ್ಯವಿದೆ ಎಂದು ಹಿರಿಯ ರಂಗಕರ್ಮಿ ಎಂ.ಎಸ್.ಭಟ್ ಅಭಿಪ್ರಾಯಪಟ್ಟಿದ್ದಾರೆ.

ಸುಮನಸಾ ಕೊಡವೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಾಂಸ್ಕೃತಿಕ ನಿರ್ದೇಶನಾಲಯ ನವದೆಹಲಿ ಇದರ ಸಹಯೋಗ ದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ‘ಅಂತರಂಗ’ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿರಿಯ ರಂಗ ನಿರ್ದೇಶಕ ಜಯರಾಂ ನೀಲಾವರ, ಶಿಬಿರದ ನಿರ್ದೇಶಕ ವಿದ್ದು ಉಚ್ಚಿಲ್, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ಗಣೇಶ್ ರಾವ್ ಎಲ್ಲೂರು, ಕಾರ್ಯದರ್ಶಿ ಅಕ್ಷತ್ ಅಮೀನ್ ಉಪಸ್ಥಿತರಿ ದ್ದರು. ದಯಾನಂದ ಯು. ಕಾರ್ಯಕ್ರಮ ನಿರೂಪಿಸಿದರು. 20 ದಿನಗಳ ಶಿಬಿರದಲ್ಲಿ ಆಯ್ದ 20 ಶಿಬಿರಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News