ಈ ವರ್ಷ ಪತ್ತೆಯಾದ ‘ನಿಪಾಹ್’ ಪ್ರಕರಣಗಳೆಷ್ಟು ಗೊತ್ತಾ: ಕೇಂದ್ರ ಆರೋಗ್ಯ ಸಚಿವರು ಹೇಳಿದ್ದು ಹೀಗೆ...

Update: 2019-06-21 16:08 GMT

ಹೊಸದಿಲ್ಲಿ, ಜೂ.21: ಮಾರಣಾಂತಿಕ ನಿಪಾಹ್ ವೈರಸ್‌ನ ಒಂದೇ ಒಂದು ಪ್ರಕರಣ ಈ ವರ್ಷ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ವರದಿಯಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.

ಜೂನ್ ತಿಂಗಳ ಮೊದಲ ವಾರದಲ್ಲಿ ನಿಪಾಹ್ ಪ್ರಕರಣ ವರದಿಯಾಗಿದೆಯೆಂದು ಅವರು ಹೇಳಿದ್ದಾರೆ. ಈ ವರ್ಷ ಒಟ್ಟು 50 ಮಂದಿ ನಿಪಾಹ್ ಶಂಕಿತರನ್ನು ಗುರುತಿಸಲಾಗಿದ್ದು, ಅವರೆಲ್ಲರನ್ನೂ ತಪಾಸಣೆಗೊಳಪಡಿಸಿದ್ದು, ಅವರಿಗೆ ಸೋಂಕು ತಗಲಿಲ್ಲವೆಂಬುದು ದೃಢಪಟ್ಟಿದೆ ಎಂದರು. ನಿಪಾಹ್ ರೋಗ ಪತ್ತೆಯಾದ ವರದಿ ಬಂದ ಕೂಡಲೇ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ (ಎನ್‌ಐವಿ) ಸಂಸ್ಥೆಯು, ನಿಪಾಹ್ ವೈರಸ್ ಹರಡುವಿಕೆಯ ಮುಖ್ಯವಾಹಕವೆಂದು ಶಂಕಿಸಲಾಗಿರುವ ಬಾವಲಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲು ವಿಶೇಷ ತಂಡಗಳನ್ನು ನಿಯೋಜಿಸಿದೆಯೆಂದು ಸಚಿವರು ರಾಜ್ಯಸಭೆಗೆ ತಿಳಿಸಿದರು.

‘‘ನಿಪಾಹ್ ಸೋಂಕಿಗೆ ಸಂಬಂಧಿಸಿ ಸಂಬಂಧಿಸಿ 36 ಫ್ರೂಟ್ ಬ್ಯಾಟ್ ( ಒಂದು ಜಾತಿಯ ಬಾವಲಿಗಳು)ಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 12 ಬಾವಲಿಗಳಲ್ಲಿ (ಶೇ.33) ವೈರಸ್ ಸೋಂಕು ಕಂಡುಬಂದಿದೆಯೆಂದು ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

2018ರಲ್ಲಿ ಕೇರಳದಲ್ಲಿ ನಿಪಾಹ್ ಸೋಂಕು ಹಾವಳಿಯ ಸಂದರ್ಭ, 52 36 ಫ್ರೂಟ್ ಬ್ಯಾಟ್‌ಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅವುಗಳಲ್ಲಿ 10 ಮಾದರಿಗಳಲ್ಲಿ ವೈರಸ್ ಸೋಂಕು ದೃಢಪಟ್ಟಿದೆಯೆಂದರು.

ನಿಪಾಹ್ ಸೋಂಕು ಪೀಡಿತ ಜಿಲ್ಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆಗಳಲ್ಲಿ ನೆರವಾಗಲು ಕೇಂದ್ರ ಆರೋಗ ಸಚಿವಾಲಯವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ), ಏಮ್ಸ್ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ತಜ್ಞರನ್ನು ಒಳಗೊಂಡ ತಂಡವೊಂದನ್ನು ನಿಯೋಜಿಸಿದೆಯೆಂದು ಅವರು ಹೇಳಿದರು.

ಈ ತಂಡವು ನಿಫಾ ರೋಗ ಸೋಂಕು ಪ್ರಕರಣದ ಪತ್ತೆ, ಶೋಧನೆ,ರಕ್ತದ ಮಾದರಿ ಪರೀಕ್ಷೆ ಹಾಗೂ ನಿಫಾ ರೋಗದ ನಿರ್ವಹಣೆಗೆ ಸಂಬಂಧಿಸಿ ಕೇರಳಕ್ಕೆ ನೆರವು ನೀಡಲಿದೆಯೆಂದು ಹರ್ಷವರ್ಧನ್ ರಾಜ್ಯಸಭೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News