×
Ad

ಉಡುಪಿ: ವಿವಿಧೆಡೆ ವಿಶ್ವ ಯೋಗ ದಿನಾಚರಣೆ

Update: 2019-06-21 22:04 IST

ಉಡುಪಿ, ಜೂ.21: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಯೋಗ ಅಭ್ಯಾಸ ಹಾಗೂ ಅತಿಥಿ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ಜರಗಿತು.

ಮುಖ್ಯ ಅತಿಥಿಯಾಗಿ ಕಾರ್ಕಳದ ಮಾನಸಿಕ ತಜ್ಞ ಡಾ.ಪ್ರಸನ್ನ ಹೆಗ್ಡೆ ಮಾನಸಿಕ ಒತ್ತಡ ನಿವಾರಣೆಯಲ್ಲಿ ಯೋಗದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಕ್ಷೇಮಪಾಲನಾಧಿಕಾರಿ ಡಾ. ನಾಗರಾಜ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ.ವಿಜಯ್ ಬಿ.ನೆಗಳೂರು ಸ್ವಾಗತಿಸಿದರು. ಸಹಪ್ರಾಧ್ಯಾಪಕ ಡಾ.ಯೋಗೀಶ್ ಆಚಾರ್ಯ ವಂದಿಸಿದರು. ಡಾಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ದರು.

ಇನ್ನಂಜೆ: ಇನ್ನಂಜೆ ಎಸ್‌ವಿಎಚ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ವಿಶ್ವಯೋಗ ದಿನಾಚರಣೆ ನಡೆಯಿತು. ಇನ್ನಂಜೆ ಜೀವನ ಕಲಾ ಯೋಗ ಸಂಸ್ಥೆಯ ಶಿಕ್ಷಕಿ ಸುಮಿತ್ರಾ ಮತ್ತು ಕಾಲೇಜಿನ ಯೋಗ ಶಿಕ್ಷಕ ಡಾ.ಗಣೇಶ ಭಟ್ ಯೋಗಾಸನದ ವುಹತ್ವವನ್ನು ವಿವರಿಸಿದರು.

ಶಿರ್ವ: ಶಿರ್ವ ಡೋನ್ ಬೋಸ್ಕೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಶಿರ್ವ, ಶಿರ್ವ ಪತಂಜಲಿ ಯೋಗ ಸಮಿತಿ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಜರಗಿತು.

ಸಂಸ್ಥೆಯ ಪ್ರಾಂಶುಪಾಲ ರೆ.ಫಾ.ಮಹೇಶ್ ಡಿಸೋಜ ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ದಯಾನಂದ ಶೆಟ್ಟಿ, ನಿಯೋಜಿತ ಅಧ್ಯಕ್ಷ ಸುನಿಲ್ ಕಬ್ರಾಲ್, ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ಲ್ಯಾನ್ಸಿ ಕೋರ್ಡಾ, ಅನಂತ್ರಾಯ ಶೆಣೈ, ರಮೇಶ್ ಸಾಲಿಯಾನ್, ಉದಯ ಆಚಾರ್ಯ, ಉಮ್ಮರ್ ಇಸ್ಮಾಯಿ್ ವಿವಿಧ ಆಸನಗಳು ಕಲಿಸಿಕೊಟ್ಟರು.

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್ ಇವುಗಳ ಜಂಟಿ ಆಶ್ರಯದಲ್ಲಿ ಸೂರ್ನಳ್ಳಿ ಸಂರಿಧ್ ನೇಚರ್ ಕ್ಯೂರ್ ಮತ್ತು ಯೋಗ ಕೇಂದ್ರದಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಯನ್ನು ಲಲಿತಾ ಬಿ.ಶೆಟ್ಟಿ ಉದ್ಘಾಟಿಸಿದರು.

ರೋಟರಿ ಅಧ್ಯಕ್ಷ ಜೋನ್ಸನ್ ಅಲ್ಮೇಡಾ, ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್ ಅಧ್ಯಕ್ಷ ಡಾ.ಸಂದೀಪ ಶೆಟ್ಟಿ, ಕಾರ್ಯದರ್ಶಿ ರಾಜು ಪೂಜಾರಿ, ಹಿರಿಯ ನ್ಯಾಯವಾದಿ ಜಿ. ಸಂತೋಷ್ ಕುಮಾರ್ ಶೆಟ್ಟಿ, ವೈದ್ಯಾಧಿಕಾರಿ ಡಾ. ಕಾವ್ಯ ಸಂದೀಪ ಶೆಟ್ಟಿ ಉಪಸ್ಥಿತರಿದ್ದರು.

ಬಡಗಬೆಟ್ಟು: ಉಡುಪಿ ಬಡಗುಬೆಟ್ಟು ಸೂಸೈಟಿಯ ಜಗನ್ನಾಥ್ ಸಭಾಂಗಣ ದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಗುರು ವೇಣುಗೋಪಾಲ್ ಭಟ್ ಅವರ ಮಾರ್ಗದರ್ಶನದಲ್ಲಿ ಯೋಗಾಸನ ಶಿಬಿರವು ಇಂದು ಜರಗಿತು.

ಯೋಗಗುರು ಲೀಲಾ ಭಟ್, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ, ಜಯಕರ್ ಶೆಟ್ಟಿ ಇಂದ್ರಾಳಿ, ನಿರ್ದೇಶಕರಾದ ಉಮಾನಾಥ್, ಪದ್ಮನಾಭ ನಾಯಕ, ವಿನಯ ಕುಮಾರ, ಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News