ವಿವಾಹಿತ ಮಹಿಳೆ ನಾಪತ್ತೆ
Update: 2019-06-21 22:08 IST
ಉಡುಪಿ, ಜೂ.21: ಬೆಳ್ವೆ ಗ್ರಾಮದ ಕಟ್ಟಿಂಗೇರಿ ನಿವಾಸಿ ರಾಧ (25) ಎಂಬವರು ಜೂ.18ರಂದು ಬೆಳಗ್ಗೆ 9:30ಕ್ಕೆ ಪಕ್ಕದ ಮನೆಗೆ ಹೋಗಿ ಬರುವು ದಾಗಿ ಹೇಳಿ ಹೋದವರು ಈವರೆಗೆ ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರವಿರುವ ಅವರು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ತೆಲುಗು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಇವರ ಪತ್ತೆಯಾದಲ್ಲಿ ಕಾರ್ಕಳ ಉಪವಿಬಾಗದ ಸಹಾಯಕ ಅಧೀಕ್ಷಕರು (ದೂರವಾಣಿ: 08258-231333, 9480805421), ಕಾಪು ಪೊಲೀಸ್ ವೃತ್ತ ನಿರೀಕ್ಷಕರು (0820-2552133, 9480805431), ಶಿರ್ವಾ ಪೊಲೀಸ್ ಠಾಣೆಗೆ (0820-2554139, 9480805451) ಮಾಹಿತಿ ನೀಡುವಂತೆ ಶಿರ್ವಾ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.