×
Ad

ಕಾವಳಪಡೂರು ಗ್ರಾ.ಪಂ ವತಿಯಿಂದ ಸ್ವಚ್ಛತಾ ಅರಿವು, ಜಲ ಸಂರಕ್ಷಣಾ ಕಾರ್ಯಕ್ರಮ

Update: 2019-06-21 22:27 IST

ಬಂಟ್ವಾಳ, ಜೂ.21: ಕಾವಳಪಡೂರು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ಅರಿವು ಹಾಗೂ ಜಲ ಸಂರಕ್ಷಣಾ ಕಾರ್ಯಕ್ರಮ ವಗ್ಗ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೇದವ್ ಮಾತನಾಡಿ ಶುಚಿತ್ವ ಕಾಪಾಡುವಂತೆ ಕೋರಿಕೊಂಡರು. ಜುಮಾ ಮಸೀದಿ ಖತೀಬ್ ಇಬ್ರಾಹಿಂ ಫೈಝಿ ಮಾತನಾಡಿ, ಶುಚಿತ್ವ ಹಾಗೂ ಜಲ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಎಂದು ಹೇಳಿದರು.

ಈ ಸಂದರ್ಭ ಮಸೀದಿ ಆಡಳಿತ ಸಮಿತಿ ಪಧಾದಿಕಾರಿಗಳು, ಪ್ರಮುಖರಾದ ಶಾಹುಲ್ ಕಾಸಿಮ್ ಮತ್ತಿತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News