×
Ad

ಉಡುಪಿ: ಕನ್ನಡ ಪುಸ್ತಕ ಮುದ್ರಣ ಬಹುಮಾನಕ್ಕೆ ಅರ್ಜಿ ಆಹ್ವಾನ

Update: 2019-06-21 22:37 IST

ಉಡುಪಿ, ಜೂ.21: ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಜನವರಿ 2018 ರಿಂದ ಡಿಸೆಂಬರ್ 2018ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ಕಲಾವಿದರು/ಲೇಖಕರು/ಪ್ರಕಾಶಕರಿಗೆ ಕನ್ನಡ ಪುಸ್ತಕ ‘ಸೊಗಸು- 2018’( ಪ್ರಥಮ, ದ್ವಿತೀಯ, ತೃತೀಯ, ಮಕ್ಕಳ ಪುಸ್ತಕ, ಮುದ್ರಣ ಸೊಗಸು, ಮುಖಪುಟ ವಿನ್ಯಾಸದ ಪ್ರಥಮ, ಮುಖಪುಟ ಚಿತ್ರ ಕಲೆಯ ದ್ವಿತೀಯ) ಬಹುಮಾನವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಆಸಕ್ತರು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು/ ಚಿತ್ರ ಕಲಾವಿದರ ಪೂರ್ಣ ವಿಳಾಸ ಈ ಎಲ್ಲಾ ವಿಷಯಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಜು.15 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸತಿಕ ಪ್ರಾಧಿಕಾರ, ಕನ್ನಡ ವನ, ಬೆಂಗಳೂರು ಇಲ್ಲಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22484516/22107704ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News