ಪರ್ಕಳದಲ್ಲಿ ಜೂ.23ರಂದು ಯೂತ್ ಫೆಸ್ಟ್-2019
ಉಡುಪಿ, ಜೂ.21: ಪರ್ಕಳದ ಜೇಸಿಐ ಪರ್ಕಳ, ವಿದ್ಯಾರ್ಥಿಗಳ, ಮಹಿಳೆಯರ ಹಾಗೂ ಸಾರ್ವಜನಿಕರ ಪ್ರತಿಭಾ ಪ್ರದರ್ಶನಕ್ಕಾಗಿ ಜೂ.23ರಂದು ಪರ್ಕಳದ ಶ್ರೀವಿಘ್ನೇಶ್ವರ ಸಭಾಭವನದಲ್ಲಿ ‘ಯೂತ್ ಫೆಸ್ಟ್-2019’ ನ್ನು ಹಮ್ಮಿಓಕೊಂಡಿದೆ.
ರವಿವಾರ ಬೆಳಗ್ಗೆ 9 ಗಂಟೆಗೆ ಯೂತ್‌ಫೆಸ್ಟ್‌ನ ಉದ್ಘಾಟನೆ ನಡೆಯಲಿದ್ದು, ಬಳಿಕ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ (1ರಿಂದ 10ನೇತರಗತಿ), ಪೋಸ್ಟರ್ ಮೇಕಿಂಗ್ (ಪಿಯುಸಿ), ವಿಜ್ಞಾನ ಮಾದರಿ ಸ್ಪರ್ಧೆ (ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10:30ಕ್ಕೆ), ಮುಖವರ್ಣಿಕೆ (1 ಕ್ಕೆ ಕಾಲೇಜು ವಿದ್ಯಾರ್ಥಿ ಗಳಿಗೆ).
ಮಹಿಳೆಯರಿಗೆ: ಬೆಂಕಿ ರಹಿತ ಅಡುಗೆ ಸ್ಪರ್ಧೆ (10:00ಕ್ಕೆ), ಭಾವಗೀತೆ ಸ್ಪರ್ಧೆ (11:30ಕ್ಕೆ). ಸಾರ್ವಜನಿಕರಿಗೆ: ರಂಗೋಲಿ (ಅಪರಾಹ್ನ 1 ), ಕೇಶಾಲಂಕಾರ (1:50ಕ್ಕೆ), ಮೆಹಂದಿ-(2:20ಕ್ಕೆ), ಭಾಷಣ-(2:30ಕ್ಕೆ), ಡ್ಯಾನ್ಸ್ ಧಮಾಕ-(ಸಂಜೆ6:30ಕ್ಕೆ) ಹಾಗೂ ಕಿರುಚಿತ್ರ ಪ್ರದರ್ಶನ. ಇದರೊಂದಿಗೆ ಮೊಬೈಲ್ ಪೋಟೊಗ್ರಫಿ ಸ್ಪರ್ಧೆಗಳು ನಡೆಯಲಿದೆ.
ಕೊನೆಯ ಮೂರನ್ನು ಹೊರತು ಪಡಿಸಿ ಉಳಿದೆಲ್ಲಾ ಸ್ಪರ್ಧೆಗಳಿಗೆ ಸ್ಥಳದಲ್ಲೇ ಹೆಸರು ನೊಂದಾಯಿಸಲು ಅವಕಾಶಗಳಿವೆ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ನಂ.:8970083108/9741249387 ಸಂಪರ್ಕಿಸಬಹುದು ಎಂದು ಜೇಸಿಐ ಪರ್ಕಳ ಪ್ರಕಟಣೆ ತಿಳಿಸಿದೆ.