ಕೆಎಸ್ಸಾರ್ಟಿಸಿ: ವಿದ್ಯಾರ್ಥಿ ಬಸ್‌ಪಾಸ್ ದರ ನಿಗದಿ

Update: 2019-06-21 17:27 GMT

ಮಂಗಳೂರು, ಜೂ.21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 2019-20ನೇ ಸಾಲಿನ ವಿದ್ಯಾರ್ಥಿ ಬಸ್‌ಪಾಸ್‌ಗಳನ್ನು ಜೂ.19ರಿಂದಲೇ ವಿತರಿಸಲಾಗುತ್ತಿದೆ. 2018-19ನೇ ಸಾಲಿನ ಪಾಸ್‌ಗಳ ದರಪಟ್ಟಿಯೇ ಪ್ರಸಕ್ತ ವರ್ಷ 2019-20ಕ್ಕೆ ಅನ್ವಯಿಸಲಿದೆ.

ಬಸ್‌ಪಾಸ್ ದರ: ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 150 ರೂ., ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) 750 ರೂ. ಹಾಗೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ (ಸಾಮಾನ್ಯ) 550 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿನಿಯರಿಗೆ 150 ರೂ., ಪಿಯುಸಿ, ಡಿಗ್ರಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) 1,050 ರೂ. ಎಸ್ಟಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ವೃತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ (ಸಾಮಾನ್ಯ) 1,550 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ಸಂಧ್ಯಾ ಕಾಲೇಜು/ಪಿಎಚ್‌ಡಿ 10 ತಿಂಗಳಿಗೆ (ಸಾಮಾನ್ಯ) 1,350 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 150 ರೂ., ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ 1,310 ರೂ., ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 160 ರೂ. ನಿಗದಿಪಡಿಸಲಾಗಿದೆ.

ವಿದ್ಯಾರ್ಥಿಗಳು ಅರ್ಜಿ ಪ್ರತಿಯನ್ನು ಆನ್‌ಲೈನ್ ಮೂಲಕ ಕೆಎಸ್ಸಾರ್ಟಿಸಇ ಜಾಲತಾಣ www.ksrtc.in ನಿಂದ ಡೌನ್‌ಲೋಡ್ ಮಾಡಿಕೊಂಡು ಶಾಲಾ/ ಕಾಲೇಜು ಮುಖ್ಯಸ್ಥರಲ್ಲಿ ದೃಢೀಕರಿಸಿ ಬಸ್‌ಪಾಸ್ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ನಿಗಮ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News