ಪಾಂಡವರಕಲ್ಲು: ಲಾರಿ ಢಿಕ್ಕಿ - ಬೈಕ್ ಸವಾರರಿಗೆ ಗಾಯ
Update: 2019-06-21 23:05 IST
ಬಂಟ್ವಾಳ, ಜೂ. 21: ಟಿಪ್ಪರ್ ಲಾರಿವೊಂದು ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ಕೋಮಿನಡ್ಕ ಎಂಬಲ್ಲಿ ಸಂಭವಿಸಿದೆ.
ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಮಡಂತ್ಯಾರುನಿಂದ ಪಾಂಡವರಕಲ್ಲಿಗೆ ಹೋಗುತ್ತಿದ್ದ ಟಿಪ್ಪರ್‍ನ ಹಿಂಬದಿಯ ಚಕ್ರಕ್ಕೆ ಬೈಕ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಬೈಕ್‍ನ ಸವಾರನ ಕಾಲು ಮುರಿದಿದ್ದು, ಸಹಸವಾರನಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಿಂದ ಬೈಕ್ ಜಖಂಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.