ಯುವತಿ ನಾಪತ್ತೆ ಪ್ರಕರಣ: ದೂರು- ಪ್ರತಿದೂರು ದಾಖಲು
Update: 2019-06-21 23:11 IST
ಬಂಟ್ವಾಳ, ಜೂ. 21: ಟೈಲರಿಂಗ್ ಶಾಪ್‍ಗೆಂದು ತೆರಳಿದ್ದ ಯುವತಿಯೋರ್ವಳು ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬಳ್ಳಮಂಜದಲ್ಲಿ ಜೂ. 20ರಂದು ನಡೆದಿದೆ.
ಬಳ್ಳಮಂಜ ನಿವಾಸಿ ಸೋನಿಯಾ ಜೇಸ್ಮಾ ಕೊನ್ಸೆಟ್ಟಾ (22) ನಾಪತ್ತೆಯಾದ ಯುವತಿ. ಈಕೆ ಜೂ. 20ರಂದು ತನ್ನ ಮನೆಯಿಂದ ಮಡಂತ್ಯಾರ್ನ ಟೈಲರಿಂಗ್ ಶಾಪ್‍ವೊಂದಕ್ಕೆ ತೆರಳಿದ್ದು, ಸಂಜೆಯಾದರೂ ಮನೆಗೆ ಹಿಂದಿರುಗದೇ ಕಾಣೆಯಾಗಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ನಾಪತ್ತೆಗೆ ಕಾರಣ ಆರೋಪಿಸಿ ಸೋನಿಯಾ ಅವರ ಪೋಷಕರು ಸ್ಥಳೀಯ ನಿವಾಸಿ ಇಂದಿರಾ ಮತ್ತು ಸುಂದರ ಪೂಜಾರಿ ಅವರ ಮನೆಗೆ ತೆರಳಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಆರು ಮಂದಿಯ ವಿರುದ್ಧ ಪ್ರತಿದೂರು ದಾಖಲಾಗಿದೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.