​ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

Update: 2019-06-21 18:19 GMT

ಮಂಗಳೂರು, ಜೂ.21: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಕಾವೂರು ಬಾರೊಂದರ ವೈಟರ್ ಪುತ್ತೂರು ಕೊಡಿಂಬಾಡಿ ನಿವಾಸಿ ಗಣೇಶ್ ರೈ (43) ಹಾಗೂ ಬೊಂದೆಲ್ ಕೆಎಚ್‌ಬಿ ಕಾಲನಿ ನಿವಾಸಿ ಸಂತೋಷ್ (28) ಬಂಧಿತರು.

ಆರೋಪಿ ಬಳಿಯಿಂದ 20 ಸಾವಿರ ರೂ. ನಗದು ಹಾಗೂ ಆಟಕ್ಕೆ ಬಳಸಿದ್ದ 20 ಸಾವಿರ ರೂ. ವೌಲ್ಯದ ಮೊಬೈಲ್ ಸೇರಿದಂತೆ ಒಟ್ಟು 40 ಸಾವಿರ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಹರೀಶ್ ಶೆಟ್ಟಿ ಹಾಗೂ ಪ್ರಮೋದ್ ತಲೆಮರೆಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾವೂರು ಇನ್‌ಸ್ಪೆಕ್ಟರ್ ಕೆ.ಆರ್.ನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News