ಚಂದ್ರನಗರ: ಮದ್ರಸ ವಿದ್ಯಾರ್ಥಿಗಳಿಗೆ ಪರಿಕರ ವಿತರಣೆ
Update: 2019-06-22 17:32 IST
ಕಾಪು, ಜೂ.22: ಚಂದ್ರನಗರ ಮಸ್ಜಿದುನ್ನೂರು ಇದರ ಅಧೀನ ಸಂಸ್ಥೆಯಾಗಿ ರುವ ಅಲ್‌ನೂರ್ ಮದರಸ ವಿದ್ಯಾರ್ಥಿಗಳಿಗೆ ಮಸೀದಿ ಅಧ್ಯಕ್ಷ ಫಕ್ರುದ್ದೀನ್ ಅಲಿ ಮತ್ತು ಅವರ ಮಕ್ಕಳು ಕೊಡುಗೆಯಾಗಿ ನೀಡಿದ ಉಚಿತ ಕುರಾನ್, ಪಠ್ಯಪುಸ್ತಕ, ನೋಟು ಪುಸ್ತಕ ಹಾಗೂ ಬ್ಯಾಗ್‌ಗಳನ್ನು ಇತ್ತೀಚೆಗೆ ವಿತರಿಸ ಲಾಯಿತು.
ಸ್ಥಳೀಯ ಮಸೀದಿ ಖತೀಬ್ ಬಶೀರ್ ಹನೀಫಿ, ಅಧ್ಯಕ್ಷ ಫಕ್ರುದ್ದೀನ್ ಅಲಿ, ಕಾರ್ಯದರ್ಶಿ ಸ್ವಾದಿಕ್, ಮಾಜಿ ಅಧ್ಯಕ್ಷ ರಜಬ್ ಅಲಿ, ಕರೀಂ ಅಲಿ, ಉಪಾಧ್ಯಕ್ಷ ಮುಸೈಕ್ ಸಾಹೇಬ್, ಅಬ್ಬಾಸ್ ಬ್ಯಾರಿ, ಆಲಿಯಬ್ಬ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹೀಮಾನ್, ಅಬ್ದುಲ್ ವಾಹಿದ್, ಸುಲೈಮಾನ್, ಹನೀಫ್, ಖಾಲಿಕ್, ಆರೀಸ್, ಉಮರಬ್ಬ, ಅಬೂಬಕ್ಕರ್, ಸಲ್ಮಾನ್, ರಝಾಕ್ ಚಂದ್ರನಗರ ಮೊದಲಾದವರು ಉಪಸ್ಥಿತರಿದ್ದರು.