×
Ad

ಜೂ.30: ಪುತ್ತೂರಿನ ನರಿಮೊಗರಿನಲ್ಲಿ ಪಳಂತುಳು ಕಾವ್ಯ ಕಮ್ಮಟ

Update: 2019-06-22 17:53 IST

ಮಂಗಳೂರು, ಜೂ.22: ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಮತ್ತು ಪುತ್ತೂರಿನ ಪಳಂತುಳು ಪ್ರತಿಷ್ಠಾನದ ಸಹಕಾರದೊಂದಿಗೆ 'ಪಳಂತುಳು ಕಾವ್ಯ ಕಮ್ಮಟ'ವು ಜೂ.30ರಂದು ಪುತ್ತೂರಿನ ನರಿಮೊಗರಿನಲ್ಲಿರುವ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 10ಗಂಟೆಗೆ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸಲಿದ್ದು, ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಪಳಂತುಳು ಪ್ರತಿಷ್ಠಾನದ ಅಧ್ಯಕ್ಷ ಡಾ.ಶ್ರೀಶಕುಮಾರ್ ಎಂ.ಕೆ ಮತ್ತು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಉಪಸ್ಥಿತರಿರುವರು.

ಅಧ್ಯಾಪಕಿ ಕವಿತಾ ಅಡೂರು 'ತುಳು ಭಾಷೆಯ ಇತಿಹಾಸ' ಮತ್ತು ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಕವಿಗಳು ಹಾಗೂ ಕಾವ್ಯಗಳ ಬಗ್ಗೆ ಉಪನ್ಯಾಸ ನೀಡುವರು ಎಂದು ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News