ಜೂ.25: ತುಳು ಅಕಾಡಮಿಯಿಂದ ಡಿ.ಕೆ.ಚೌಟರಿಗೆ ಶೃದ್ಧಾಂಜಲಿ
Update: 2019-06-22 17:55 IST
ಮಂಗಳೂರು,ಜೂ.22: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪುರಸ್ಕೃತ, ಸಾಹಿತಿ, ಅಕಾಡಮಿಯ ಮಾಜಿ ಸದಸ್ಯರೂ ಹಿರಿಯ ತುಳು, ಕನ್ನಡ ಸಾಹಿತಿ ಹಾಗೂ ರಂಗಕರ್ಮಿ ಡಿ.ಕೆ. ಚೌಟ ಅವರಿಗೆ ಶೃದ್ಧಾಂಜಲಿ ಕಾರ್ಯಕ್ರಮವು ಜೂ.25ರಂದು ಅಪರಾಹ್ನ 3:30ಕ್ಕೆ ಅಕಾಡಮಿಯ ‘ಸಿರಿ ಚಾವಡಿ’ಯಲ್ಲಿ ಆಯೋಜಿಸಲಾಗಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ತಿಳಿಸಿದ್ದಾರೆ.